ಬೆಂಗಳೂರು : ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ‘ಕಿಂಗ್ ಕೊಹ್ಲಿ ವಿರಾಟರೂಪ’ ಪ್ರದರ್ಶಿಸಿದರು. ಆ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದರು.
ಹೌದು, ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ಕಿಂಗ್ ಕೊಹ್ಲಿ ಮತ್ತೊಮ್ಮೆ ಘರ್ಜಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ಬದಿಯಲ್ಲಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಗುಜರಾತ್ ಬೌಲರ್ ಗಳ ಪಾಲಿಗೆ ಅಕ್ಷರಶಃ ವಿಲನ್ ಆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ನಾಯಕ ಫಾಪ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ 67 ರನ್ ಗಳ ಉತ್ತಮ ಜೊತೆಯಾಟ ನೀಡಿದರು. ಬಳಿಕ, ವಿಕೆಟ್ ಗಳ ಉರುಳತೊಡಗಿದವು. ಡುಪ್ಲೆಸಿಸ್ 28, ಮ್ಯಾಕ್ಸ್ ವೆಲ್ 11, ಲೊಮ್ರೋರ್ 1, ಬ್ರೇಸ್ ವೆಲ್ 26 ಹಾಗೂ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿ ಔಟಾದರು.
𝗨𝗡𝗦𝗧𝗢𝗣𝗣𝗔𝗕𝗟𝗘 🫡
Back to Back Hundreds for Virat Kohli in #TATAIPL 2023 👏🏻👏🏻
Take a bow 🙌 #RCBvGT | @imVkohli pic.twitter.com/p1WVOiGhbO
— IndianPremierLeague (@IPL) May 21, 2023
ಇದನ್ನೂ ಓದಿ : 14 ಸೀಸನ್, 12 ಪ್ಲೇಆಫ್, 9 ಫೈನಲ್ಸ್, 4 ಟ್ರೋಫಿ, ಒಬ್ಬ ಕ್ಯಾಪ್ಟನ್ = ಎಂ.ಎಸ್ ಧೋನಿ
ಮತ್ತೊಂದೆಡೆ ಏಕಾಂಗಿಯಾಗಿ ಹೋರಾಟ ನಡೆಸಿದ ಕಿಂಗ್ ಕೊಹ್ಲಿ 61 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 13 ಬೌಂಡರಿ ನೆರವಿನೊಂದಿಗೆ ಅಜೇಯ 101* ಸಿಡಿಸಿದರು. ವಿರಾಟ್ ಗೆ ಉತ್ತಮ ಸಾಥ್ ನೀಡಿದ ಅನುಜ್ ರಾವತ್ 15 ಎಸೆತಗಳಲ್ಲಿ 25 ರನ್ ಸಿಡಿಸಿದರು. ಆ ಮೂಲಕ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು. ಗುಜರಾತ್ ತಂಡದ ಪರ ಬೌಲರ್ ಗಳಾದ ನೂರ್ ಅಹಮ್ಮದ್ 2, ರಶೀದ್ ಖಾನ್, ದಯಾಲ್, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
ಗೇಲ್ ದಾಖಲೆ ಪುಡಿ ಪುಡಿ
ಪ್ಲೇಆಫ್ ಒತ್ತಡದ ನಡುವೆಯೂ ರನ್ ಮಷಿನ್ ವಿರಾಟ್ ಕೊಹ್ಲಿ ಸ್ಫೋಟಕ ಶತಕ ಸಿಡಿಸಿ ಮತ್ತೊಂದು ದಾಖಲೆ ಬರೆದರು. ಐಪಿಎಲ್ ಟೂರ್ನಿಯಲ್ಲಿ 7ನೇ ಶತಕ ದಾಖಲಿಸಿದ ವಿರಾಟ್, ಗರಿಷ್ಠ ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ಮೂಲಕ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಉಡೀಸ್ ಮಾಡಿದರು.
ಗರಿಷ್ಠ ಶತಕ ದಾಖಲಿಸಿದವರು
- ವಿರಾಟ್ ಕೊಹ್ಲಿ : 07
- ಕ್ರಿಸ್ ಗೇಲ್ : 06
- ಜೋಸ್ ಬಟ್ಲರ್ 05
ಪ್ರಸಕ್ತ ಟೂರ್ನಿಯಲ್ಲಿ ವಿರಾಟ್ ಸಾಧನೆ
82*(49)
21(18)
61(44)
50(34)
06(4)
59(47)
00(1)
54(37)
31(30)
55(46)
01(4)
18(19)
100(63)
101*(61)