ಬೆಂಗಳೂರು : ಬರೀ 5 ಲಕ್ಷ ಕೊಟ್ಟರೆ ಪರಿಹಾರ ಅಲ್ಲ. ಮುಂದೆ ಇಂತಹ ಸಂದರ್ಭಗಳು ಬರಬಾರದು ಎಂದು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಆದಿ ಚುಂಚನಗಿರಿಯಲ್ಲಿ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಮಳೆ ಅವಾಂತರ ವಿಚಾರ ಪ್ರತಿಕ್ರಿಯೆ ನೀಡಿ, ಪ್ರಕೃತಿ ಯಾರ ಕೈನಲ್ಲು ಇಲ್ಲ, ನಾವು ಎಚ್ಚರಿಕೆಯಿಂದ ಇರಬೇಕು. ಏನೇನೂ ಹಾನಿಯಾಗಿದೆ ಸರಿ ಮಾಡಬೇಕು. ಸರಿ ಮಾಡುವ ಕಾಲ ಬಂದಿದೆ ಮಾಡ್ತೇವೆ. ನಾನು ಇಲ್ಲಿದ್ದೇನೆ ಏನು ಹೇಳಕ್ಕಾಗಲ್ಲ. ಎಲ್ಲದಕ್ಕೂ ಪರಿಹಾರ ಒಂದೆ ಪರಿಹಾರವಲ್ಲ ಎಂದು ತಿಳಿಸಿದರು.
ನಾನು ಭಕ್ತ..ಭಗವಂತನ ಕೈ ಮುಗಿಯಲು ಬಂದಿದ್ದೇನೆ. ನಾನು ಈ ಹಿಂದೆ ಹೇಳಿದ್ದೇನೆ ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರು ದೈವ ಒಂದೆ. ಪೂಜೆ ಯಾವುದಾದರೂ ಭಕ್ತಿ ಒಂದೆ. ಕರ್ಮ ಯಾವುದಾದರೂ ನಿಷ್ಟೆ ಒಂದೆ. ದೇವನೊಬ್ಬ ನಾಮನು. ಎಲ್ಲಾ ಸಮಾಜದವರಿಗೆ ಅವರದೇ ಅದ ನಂಬಿಕೆ ಇರುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ : ಇದು ‘ಬಿಬಿಎಂಪಿ ನಿರ್ಲಕ್ಷ್ಯದ ಪರಮಾವಧಿ’ : ಹೆಚ್.ಡಿ ಕುಮಾರಸ್ವಾಮಿ ಕಿಡಿ
ಟೈಮ್ ಬಂದಾಗ ಎಲ್ಲಾ ಹೇಳ್ತೇನೆ
ಮನೆಯನ್ನು ಹೇಗೆ ಹುಷಾರಾಗಿ ಇಟ್ಟಿಕೊಳ್ಳುತ್ತೇವೋ ಹಾಗೆಯೇ ಮಠವನ್ನು ಹುಷಾರಾಗಿ ಇಟ್ಟುಕೊಳ್ಳುತ್ತೇವೆ. ಟೈಮ್ ಬಂದಾಗ ಮಂಡ್ಯ ಜನತೆಗೆ ಹೇಳುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದರು.
ಸಿಎಂ ಪಟ್ಟ ಕೈತಪ್ಪಿದ ಬಗ್ಗೆ ಚರ್ಚೆ
ಇದಕ್ಕೂ ಮುನ್ನ ನಿರ್ಮಲಾನಂದ ಸ್ವಾಮೀಜಿ ಜೊತೆ ಡಿಕೆಶಿ ಚರ್ಚೆ ನಡೆಸಿದರು. ಸ್ವಾಮೀಜಿ ಜೊತೆ ಒಂದು ಗಂಟೆಗೂ ಅಧಿಕ ಕಾಲ ಡಿಕೆಶಿ ಚರ್ಚೆಯಲ್ಲಿ ತೊಡಗಿದರು. ಶ್ರಿಗಳು ರಾಜಕೀಯ ವಿದ್ಯಾಮಾನ ಹಾಗೂ ಇನ್ನಿತರ ವಿಷಯಗಳ ಕುರಿತು ನೂತನ ಉಪಮುಖ್ಯಮಂತ್ರಿಗೆ ಕೆಲವೊಂದಷ್ಟು ಸಲಹೆ ಸೂಚನೆ ನೀಡಿದರು. ಸಿಎಂ ಪಟ್ಟ ಕೈತಪ್ಪಿದ ಬಗ್ಗೆಯು ಡಿಕೆಶಿ ಬಳಿ ಸ್ವಾಮೀಜಿಗಳು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.