Wednesday, January 22, 2025

ಮೃತ ಯುವತಿ ಕುಟುಂಬಕ್ಕೆ ‘5 ಲಕ್ಷ ರೂ. ಪರಿಹಾರ’ : ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಸಾವನ್ನಪ್ಪಿರುವ ಯುವತಿ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳ ವೀಕ್ಷಣೆ ನಡೆಸಿದರು. ನಂತರ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೃತ ಯುವತಿಯ ಕುಟುಂಬಕ್ಕೆ ರಾಜ್ಯ ಸರ್ಕಾರದದಿಂದ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು. ಅಲ್ಲದೆ, ಘಟನೆಯಲ್ಲಿ ಅಸ್ವತ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕುಟುಂಬ ಸದಸ್ಯರ ಚಿಕಿತ್ಸಾ ವೆಚ್ವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

ಬಾಡಿಗೆ ವಾಹನ ಪಡೆದು ಬೆಂಗಳೂರು ನಗರವನ್ನು ನೋಡಲು ಬಂದಿದ್ದರು. ಚಾಲಕ ಸೇರಿ ಏಳು ಮಂದಿ ಇದ್ದರು. ಮಳೆಯ ಪ್ರಮಾಣದ ಅಂದಾಜು ಇರಲಿಲ್ಲ. ಚಾಲಕ ಅಂಡರ್ ಪಾಸ್ ಒಳಗೆ ಹೋಗಬಾರದಿತ್ತು. ಕಾರಿನ ಬಾಗಿಲುಗಳು ಓಪನ್ ಆಗಿಲ್ಲ. ನೀರಿನ ಒತ್ತಡದಿಂದಾಗಿ ಗಾಜು ಸಹ ಜಾಮ್ ಆಗಿದೆ. ಭಾನುರೇಖಾ ನೀರು ಕುಡಿದ ಹಿನ್ನೆಲೆ ಸಾವನಪ್ಪಿದ್ದಾರೆ ಎಂದು ಹೇಳಿದರು.

ಆಸ್ಪತ್ರೆಗೆ ತಲುಪುವ ಮುನ್ನವೇ ಅವಳ ನಿಧನವಾಗಿತ್ತು. ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು. ದೃಢಪಟ್ಟ ಬಳಿಕ ಎರಡನೇ ಹಂತದಲ್ಲಿ ಇನ್ನೊಮ್ಮೆ ತಪಾಸಣೆ ಮಾಡಿದ್ದಾರೆ. ವಿಪರೀತ ನೀರು ತುಂಬಿಕೊಂಡ ಸಂದರ್ಭದಲ್ಲಿ ಸಂಚಾರವನ್ನು ಸ್ಥಗಿತ ಮಾಡಬೇಕು. ಆದರೆ, ಅನಿರೀಕ್ಷಿತವಾಗಿ ಮಳೆ ಬಂದು ಏಕಾಏಕಿ ನೀರು ತುಂಬಿದೆ. ವಾಹನದಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿಗೆ ಏನು ಆಗಿಲ್ಲ. ಚಾಲಕ ಸಹ ಸುರಕ್ಷಿತವಾಗಿದ್ದಾನೆ ಎಂದು ಮಾಹಿತಿ ನೀಡಿದರು.

ವಿರುದ್ಧ ತನಿಖೆ ನಡೆಸುತ್ತೇವೆ

ಆಸ್ಪತ್ರೆಯಿಂದ ವಿಳಂಬ ಆಗಿದ್ದರೆ ಅದನ್ನು ವಿಚಾರಣೆ ಮಾಡೋಣ. ಆಸ್ಪತ್ರೆಯವರು ನಿರ್ಲಕ್ಷ ಮಾಡಿದ್ದರೆ ಅದರ ವಿರುದ್ಧ ತನಿಖೆ ನಡೆಸುತ್ತೇವೆ. ಸದ್ಯ ಆಸ್ಪತ್ರೆ ವೈದ್ಯರು ಈ ರೀತಿ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಹೇಳುತ್ತಾರೆ. ಮೃತ ಮಹಿಳೆ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಉದ್ಯೋಗ ಮಾಡುತ್ತಿದ್ದಳು. ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸುತ್ತಿದ್ದೇನೆ. ಆರೋಗ್ಯ ಸಮಸ್ಯೆ ಎದುರಾದವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಾರಿನಲ್ಲೇ ಯುವತಿ ಅಸ್ವಸ್ಥ

ಆಂಧ್ರದಿಂದ ಬಂದಿದ್ದ ಕುಟುಂಬ ಭಾರೀ ಮಳೆಯಿಂದಾಗಿ ಕೆ.ಆರ್‌ ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ತುಂಬಿದ್ದ ನೀರಿನಲ್ಲಿ ಸಲಿಕಿತ್ತು. ಅಂಡರ್‌ಪಾಸ್‌ ನಲ್ಲಿ ಎದೆಮಟ್ಟಕ್ಕೆ ನೀರು ನಿಂತಿದ್ದರಿಂದ ಕಾರು ಚಲಿಸಲು ಸಾಧ್ಯವಾಗಿಲ್ಲ. ಕಾರು ಅಲ್ಲೇ ಸಿಲುಕಿಕೊಂಡಿದೆ. ಬಳಿಕ, ಕಾರಿನ ಒಳಗೆ ನೀರು ನುಗ್ಗಿದೆ. ಈ ವೇಳೆ ಭಾನುರೇಖಾ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಯುವತಿ ಸಾವನ್ನಪ್ಪಿದ್ದಾರೆ.

RELATED ARTICLES

Related Articles

TRENDING ARTICLES