Sunday, December 22, 2024

ಸಿದ್ರಾಮಣ್ಣ.. ಈ ವರ್ಷದ ಬಜೆಟ್ ಗಾತ್ರವೆಷ್ಟು? : ‘ಸಿಎಂ ಸಿದ್ದು’ಗೆ ಪ್ರತಾಪ್ ಸಿಂಹ 5 ಪ್ರಶ್ನೆ

ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕಾರ ಮಾಡಿರುವ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಸರ್ ಹಾಗೂ ಡಿ.ಕೆ ಶಿವಕುಮಾರ್  ಅಣ್ಣನಿಗೆ ಅಭಿನಂದನೆಗಳು. ನಿಮ್ಮ ಚುನಾವಣಾ ಭಾಗ್ಯಗಳನ್ನು ಸರ್ಕಾರಿ ಆದೇಶಗಳಾಗಿ ಘೋಷಿಸುವ ಜೊತೆಗೆ ಈ ಕೆಳಕಂಡ ಅಂಶಗಳನ್ನೂ ಶ್ವೇತಪತ್ರದ ಮೂಲಕ ಬಹಿರಂಗಪಡಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  1. ರಾಜ್ಯದ ಈ ವರ್ಷದ ಬಜೆಟ್ ಗಾತ್ರವೆಷ್ಟು?
  2. ಈ ದಿನದವರೆಗಿನ ನಮ್ಮ ಒಟ್ಟು ಸಾಲ ಎಷ್ಟಿದೆ?
  3. ವಾರ್ಷಿಕ ಬಡ್ಡಿ ಮತ್ತು ಅಸಲು ಮರುಪಾವತಿಗೆ ಎಷ್ಟು ಬೇಕು?
  4. ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೆ ಎಷ್ಟು ಸಾವಿರ ಕೋಟಿ ಬೇಕು?
  5. ಸರ್ಕಾರಿ ಯೋಜನೆಗಳ ಮುಂದುವರಿಕೆಗೆ ಎಷ್ಟು ಬೇಕು?

ಇದನ್ನೂ ಓದಿ : ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕಾರ

2028ರಲ್ಲಿ ಮತ್ತೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಂದಾಗ ರಾಜ್ಯದ ಅರ್ಥವ್ಯವಸ್ಥೆಯ ಆರೋಗ್ಯ ಹೇಗಿರುತ್ತೆ ಎಂಬುದರ ಅಂದಾಜು ಸಿಗಲಿ ಎಂಬ ಕಾರಣಕ್ಕೆ ಈ ಪ್ರಶ್ನೆಗಳು ಅಷ್ಟೇ ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದಾರೆ.

ನೀವು ಮಾಡುವ ಸಾಲ ಎಷ್ಟು?

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಒಟ್ಟಾರೆ ಸಾಲದ ಜೊತೆ 3 ವರ್ಷ 10 ತಿಂಗಳ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಸಾಲದ ಹೊರೆಯನ್ನೂ ಬಹಿರಂಗಪಡಿಸಿ, ಮುಂದೆ ನೀವು ಮಾಡಲಿರುವ ಸಾಲದ ಅಂದಾಜೂ 2028ರಲ್ಲಿ ಸಿಗುತ್ತದೆ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES