Wednesday, January 22, 2025

14 ಸೀಸನ್, 12 ಪ್ಲೇಆಫ್, 9 ಫೈನಲ್ಸ್, 4 ಟ್ರೋಫಿ, ಒಬ್ಬ ಕ್ಯಾಪ್ಟನ್ = ಎಂ.ಎಸ್ ಧೋನಿ

ಬೆಂಗಳೂರು : 14 ಸೀಸನ್, 12 ಪ್ಲೇಆಫ್, 9 ಫೈನಲ್ಸ್, 4 ಟ್ರೋಫಿ, ಒಂದು ತಂಡ, ಒಬ್ಬ ಕ್ಯಾಪ್ಟನ್ = ಎಂ.ಎಸ್ ಧೋನಿ. ಸದ್ಯ ಕ್ರಿಕೆಟ್ ದುನಿಯಾದಲ್ಲಿ ಇದು ಟ್ರೆಂಡ್ ಸೆಟ್ ಆಗಿದೆ.

ಹೌದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕ್ಯಾಪ್ಟನ್ ಕೂಲ್ ಮಹಿ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವೇ ಸರಿ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ‘ಮಹಿ ಕಮಾಲ್’ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಘೋಷಿಸಿದ್ದರೂ, ಅವರ ವರ್ಚಸ್ಸು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ದಿನೇ ದಿನೆ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಧೋನಿ ಪ್ರತಿನಿಧಿಸುತ್ತಿರುವ ಚೆನ್ನೈ ತಂಡದಲ್ಲಿ ಧೋನಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

4 ಬಾರಿ ಚಾಂಪಿಯನ್

ಐಪಿಎಲ್ ಇತಿಹಾಸದಲ್ಲಿ ಈವರೆಗೆ 15 ಆವೃತ್ತಿಗಳು ಪೂರ್ಣಗೊಂಡು 16ನೇ ಆವೃತ್ತಿ ಚಾಲ್ತಿಯಲ್ಲಿದೆ. ಎಂ.ಎಸ್ ಧೋನಿ 14 ಸೀಸನ್ ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 12 ಆವೃತ್ತಿಯಲ್ಲಿ 12 ಬಾರಿ ಚೆನ್ನೈ ತಂಡವನ್ನು ಪ್ಲೇಆಫ್ ಅಂತಕ್ಕೆ ಕೊಂಡೊಯ್ದಿದ್ದಾರೆ. 9 ಬಾರಿ ಚೆನ್ನೈ ಫೈನಲ್ಸ್ ಗೆ ತಲುಪಿದ್ದು, 4 ಬಾರಿ ಧೋನಿ ಸಾರಥ್ಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಸಾಧನೆ ಧೋನಿ ನಾಯಕತ್ವದಲ್ಲೇ ಎನ್ನುವುದು ವಿಶೇಷ.

ಇದನ್ನೂ ಓದಿ : Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿದ ಕಿಂಗ್ ಕೊಹ್ಲಿ

16ನೇ ಆವೃತ್ತಿಯಲ್ಲೂ ಪ್ಲೇಆಫ್ ಗೆ ಲಗ್ಗೆ

ಇನ್ನೂ ಪ್ರಸಕ್ತ ಸಾಲಿನ 16ನೇ ಆವೃತ್ತಿಯಲ್ಲೂ ಧೋನಿ ಸಾರಥ್ಯದ ಚೆನ್ನೈ ತಂಡ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 77 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್​ಗೆ ಪ್ರವೇಶಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 224 ರನ್ ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಚೆನ್ನೈ ತಂಡ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು.

ಯಶಸ್ಸಿಗೆ ಯಾವುದೇ ಸೂತ್ರವಿಲ್ಲ

‘ಯಶಸ್ಸಿಗೆ ಯಾವುದೇ ಸೂತ್ರವಿಲ್ಲ. ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಅವಕಾಶ ನೀಡಬೇಕು. ಅವರ ತಪ್ಪುಗಳನ್ನು ಸರಿಪಡಿಸಬೇಕು ಹಾಗೂ ತಂಡಕ್ಕಾಗಿ ಯಾವುದೇ ಸ್ಥಾನ ತ್ಯಾಗಕ್ಕೂ ಸಿದ್ಧರಿರಬೇಕು’.

  • ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ

ಐಪಿಎಲ್‌ನಲ್ಲಿ ಚೈನ್ನೈ ನಡೆದು ಬಂದ ಹಾದಿ

2008 : ಫೈನಲಿಸ್ಟ್

2009 : ನಾಲ್ಕನೇ ಸ್ಥಾನ

2010 : ಚಾಂಪಿಯನ್ಸ್

2011 : ಚಾಂಪಿಯನ್ಸ್

2012 : ಫೈನಲಿಸ್ಟ್

2013 : ಫೈನಲಿಸ್ಟ್

2014 : ಮೂರನೇ ಸ್ಥಾನ

2015 : ಫೈನಲಿಸ್ಟ್

2018 : ಚಾಂಪಿಯನ್ಸ್

2019 : ಫೈನಲಿಸ್ಟ್

2020 : ಏಳನೇ ಸ್ಥಾನ

2021 : ಚಾಂಪಿಯನ್ಸ್

2022 : 9ನೇ ಸ್ಥಾನ

2023 : ಪ್ಲೇ ಆಫ್‌ಗೆ ಅರ್ಹತೆ(ಪ್ರಸ್ತುತ)

RELATED ARTICLES

Related Articles

TRENDING ARTICLES