ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಬಗ್ಗುಬಡಿಯಿತು. ಈ ಗೆಲುವಿನೊಂದಿಗೆ ಎರಡನೇ ತಂಡವಾಗಿ ಪ್ಲೇಆಫ್ಗೆ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 224 ರನ್ ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು.
Q-ila win done right! ✅#DCvCSK #WhistlePodu #Yellove 🦁💛 pic.twitter.com/n5UoaBVZDt
— Chennai Super Kings (@ChennaiIPL) May 20, 2023
ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಡೇವಿಡ್ ವಾರ್ನರ್ 86 ರನ್ ಗಳಿಸಿದರು. ಯಶ್ ದುಲ್ 13, ಅಕ್ಷರ್ ಪಟೇಲ್ 15 ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಗಳು ಒಂದಕ್ಕಿ ದಾಟಲಿಲ್ಲ. ಹೀಗಾಗಿ, ಡೆಲ್ಲಿ 77 ರನ್ ಗಳ ಹೀನಾಯ ಸೋಲು ಅನುಭವಿಸಿತು.
ಇದನ್ನೂ ಓದಿ : ವಿರಾಟ್, ಡುಪ್ಲೆಸಿಸ್ ಸಿಡಿಲಬ್ಬರದ ಬ್ಯಾಟಿಂಗ್ : ಕಿಂಗ್ ‘ಕೊಹ್ಲಿ ಭರ್ಜರಿ ಶತಕ’
We play ON! 🦁🔥#WhistlePodu #Yellove 🦁💛 pic.twitter.com/L1vLxjcNzN
— Chennai Super Kings (@ChennaiIPL) May 20, 2023
ಬೌಲಿಂಗ್ ನಲ್ಲೂ ಚೆನ್ನೈ ಮಿಂಚು
ಡೆಲ್ಲಿ ವಿರುದ್ಧ ಚೆನ್ನೈ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಯಶಸ್ವಿಯಾಯಿತು. ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದರೆ, ದೀಪಕ್ ಚಹಾರ್ ಹಾಗೂ ಪತೀರಣ ತೂಫಾನ್ ಬೌಲಿಂಗ್ ಮಾಡಿದರು. ದೀಪಕ್ ಚಹಾರ್ 3, ಪತೀರಣ 2, ತೀಕ್ಷಣ 2, ತುಷಾರ್ ದೇಶಪಾಂಡೆ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು.
20 ಸಿಕ್ಸರ್, 28 ಬೌಂಡರಿ
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬ್ಯಾಟರ್ ಗಳು ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದರು. ಬರೋಬ್ಬರಿ 20 ಸಿಕ್ಸರ್ ಹಾಗೂ 28 ಬೌಂಡರಿಗಳನ್ನು ಸಿಡಿಸಿದರು. ಈ ಪೈಕಿ ಚೆನ್ನೈ ಬ್ಯಾಟರ್ ಗಳು 14 ಸಿಕ್ಸರ್, 17 ಬೌಂಡರಿ ಗಳಿಸಿದರು. ಡೆಲ್ಲಿ ಪರ 6 ಸಿಕ್ಸರ್ ಹಾಗೂ 11 ಬೌಂಡರಿ ಹರಿದುಬಂದವು.