ಬೆಂಗಳೂರು : 2000 ರೂ. ನೋಟುಗಳ ಚಲಾವಣೆ ಕುರಿತು ಆರ್ ಬಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಹೌದು, 2000 ರೂ. ಮುಖ ಬೆಲೆಯ ನೋಟುಗಳ ಕುರಿತು ಆರ್ ಬಿಐ ಸಂಚಲನಕಾರಿ ನಿರ್ಧಾರ ಕೈಗೊಂಡಿದೆ. ಈ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಹಾಕಲಾಗುತ್ತಿದೆ ಎಂದು ಆರ್ ಬಿಐ ಪ್ರಕಟಿಸಿದೆ.
ಈ ತಿಂಗಳ 23 ರಿಂದ ಸೆಪ್ಟೆಂಬರ್ 30 ರವರೆಗೆ ಜನರು ತಮ್ಮ 2000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಬಹುದು ಮತ್ತು ಠೇವಣಿ ಮಾಡಬಹುದು ಎಂದು ಆರ್‌ಬಿಐ ಹೇಳಿದೆ. ಜನರು ಒಮ್ಮೆ ಗರಿಷ್ಠ 20 ಸಾವಿರವರೆಗೆ ಠೇವಣಿ ಇಡಬಹುದು ಎಂದು ತಿಳಿಸಲಾಗಿದೆ.
Reserve Bank of India has advised banks to stop issuing Rs 2000 denomination banknotes with immediate effect though banknotes in Rs 2000 denomination will continue to be legal tender. https://t.co/yLWWpyuahL pic.twitter.com/kPTMqlm1XD
— ANI (@ANI) May 19, 2023
ಇದನ್ನೂ ಓದಿ : 500 ಕೋಟಿ ರೂ ಮುಖ ಬೆಲೆಯ ಕೆ.ಎಸ್ ಈಶ್ವರಪ್ಪ ನೋಟು ಬಿಡುಗಡೆ.!
ನೋಟು ಚಲಾವಣೆ ಸ್ಥಗಿತ, ಮುಂದೇನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆದಿದೆ. ಅಂದರೆ, ನೋಟು ಚಲಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಇನ್ಮುಂದೆ ಗ್ರಾಹಕರಿಗೆ 2,000 ರೂ. ನೋಟುಗಳನ್ನು ನೀಡದಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಬ್ಯಾಂಕ್ ಗಳು 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಗ್ರಾಹಕರು 2,000 ರೂ. ನೋಟುಗಳನ್ನು ನೀಡಿ ಬೇರೆ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ತಿಳಿಸಿದೆ.
ಕಾಂಗ್ರೆಸ್ ಲೇವಡಿ
2,000 ರೂ. ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಲಾವಣೆಯಿಂದ ಹಿಂಪಡೆದಿರುವ ಬಗ್ಗೆ ಭಾರತೀಯ ಯುವ ಕಾಂಗ್ರೆಸ್ ಲೇವಡಿ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ Rest in Peace ಪೋಸ್ಟ್ ಮಾಡಿದೆ.
RIP 🙏🏻 pic.twitter.com/88Taj1lA0V
— Indian Youth Congress (@IYC) May 19, 2023