Sunday, August 24, 2025
Google search engine
HomeUncategorized'ಲೋಕಸಭಾ ಚುನಾವಣೆ ಸ್ಪರ್ಧೆ' ಬಗ್ಗೆ ನಿಖಿಲ್ ಅಚ್ಚರಿ ಹೇಳಿಕೆ

‘ಲೋಕಸಭಾ ಚುನಾವಣೆ ಸ್ಪರ್ಧೆ’ ಬಗ್ಗೆ ನಿಖಿಲ್ ಅಚ್ಚರಿ ಹೇಳಿಕೆ

ಚನ್ನಪಟ್ಟಣ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರೆ. ಇದೀಗ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ.

ಲೋಕಸಭಾ ಚುನಾವಣೆಯಲ್ಲಿ ಸರ್ಧೆ ಮಾಡುವ ವಿಚಾರವಾಗಿ ಚನ್ನಪ್ಟಣದಲ್ಲಿ ಸುದ್ದಿಗಾರರೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಉತ್ತರ ಇಲ್ಲ. ರಾಜಕೀಯದ ಬಗ್ಗೆ ನಾನು ಚಿಂತನೆ ನಡೆಸಲ್ಲ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಟ್ಟಿರುವ ಪಕ್ಷವನ್ನು ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ. ಲೋಕಸಭೆ ಆಗಲಿ, 2028ರ ವಿಧಾನಸಭಾ ಚುನಾವಣೆ ಬಗ್ಗೆ ನಾನು ಯಾವುದೇ ತಿರ್ಮಾನ ತೆಗೆದುಕೊಳ್ಳುವುದಿಲ್ಲ. 2028ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಬಂದ್ರೆ ಕಾರ್ಯಕರ್ತರಲ್ಲಿ ಚರ್ಚಿಸುತ್ತೇನೆ. ನಾನು ಜಿಲ್ಲೆಯನ್ನು ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಸೋತ ಮಾತ್ರಕ್ಕೆ ಮನೆ ಸೇರಲ್ಲ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಪಂಚರತ್ನ ಯೋಜನೆ ಬಗ್ಗೆ ರಾಜ್ಯದ ಜನತೆಗೆ ತಿಳಿಸುವ ಒತ್ತಡದಲ್ಲಿದ್ದರು. ಆದರೂ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದಾರೆ. ಚುನಾವಣೆಯಲ್ಲಿ ಯಾರದರೂ ಒಬ್ಬರು ಗೆಲ್ಲಬೇಕು. ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ. ಕಾರ್ಯಕರ್ತರು ಎದೆಗುದಲೂ ನಾನು ಬಿಡುವುದಿಲ್ಲ ಎಂದು ಪುಟುದೇಳುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಜೆಡಿಎಸ್ ಸೋಲಿಸಿದ್ದಕ್ಕೆ ಮಂಡ್ಯ ಜನರಿಗೆ ಸುಮಲತಾ ಧನ್ಯವಾದ

76 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದೇನೆ

ನನಗೆ ರಾಮನಗರದಲ್ಲಿ 76 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ತಾಂತ್ರಿಕವಾಗಿ ನಾನು ಚುನಾವಣೆಯಲ್ಲಿ‌ ಸೋತಿರಬಹುದು. ಆದರೆ, ಕ್ಷೇತ್ರದ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಆದರೂ ನನಗೂ ನೋವು ಉಂಟಾಗಿದೆ. 2004ರಿಂದ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಈ ಬಾರಿ ಜನರು ಬೇರೆ ರೀತಿ ತಿರ್ಮಾನ ತೆಗೆದುಕೊಂಡಿದ್ದಾರೆ ಎಂದು ನಿಖಿಲ್ ಹೇಳಿದ್ದಾರೆ.

ರಾಮನಗರ ಬಿಟ್ಟು ಹೋಗುವುದಿಲ್ಲ

ಮಂಡ್ಯದ ರೀತಿಯೇ ಇಲ್ಲಿಯೂ ಆಗಿರುವ ಬಗ್ಗೆ ನಿಮ್ಮ‌ ಬಳಿ ಹಂಚಿಕೊಂಡಿದ್ದೆ. ಇಲ್ಲಿ ಮಧ್ಯರಾತ್ರಿ ಕೂಪನ್ ಓಚರ್ ಕೊಟ್ಟು ಆರ್ಥಿಕವಾಗಿ ಹಿಂದೂಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅರಿವಾಗುತ್ತದೆ. ನಿಖಿಲ್ ರಾಮನಗರ ತೊರೆಯುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಾನು ಯಾವುದೇ ಕಾರಣಕ್ಕೂ ರಾಮನಗರ ಬಿಟ್ಟು ಹೋಗುವುದಿಲ್ಲ. ಜನರನ್ನು ಕೈ ಬಿಡುವ ಪ್ರಶ್ನೆ ಇಲ್ಲ‌. ಜನರಿಗೆ ಅಧಿಕಾರ ಇಲ್ಲದಿದ್ದರೂ ಸೇವೆ ಮಾಡುತ್ತೇವೆ ಎಂದು ನಿಖಿಲ್ ಭರವಸೆ ನೀಡಿದ್ದಾರೆ.

ಒಕ್ಕಲಿಗ ನಾಯಕರು ಸಿಎಂ ಆಗಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿರುವ ನಿಖಿಲ್, ಕಾಂಗ್ರೆಸ್ ಪಕ್ಷದಲ್ಲಿ ಆಗುವ ಬೆಳವಣಿಗೆಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ಅಂತಿಮವಾಗಿ ರಾಜ್ಯದ ಜನರು ಒಂದು ತಿರ್ಮಾನ ಮಾಡಿದ್ದಾರೆ. ಸ್ವತಂತ್ರದ ಸರ್ಕಾರ ನಡೆಸಲು ಕಾಂಗ್ರೆಸ್ ಗೆ ರಾಜ್ಯದ ಜನರು ಬೆಂಬಲ‌ ನೀಡಿದ್ದಾರೆ. ಈಗಾಗಿ ಅವವೇ ಉತ್ತರ ನೀಡಬೇಕು ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments