Saturday, April 20, 2024

ಬಂಡೆ ‘ಟ್ರಬಲ್ ಶೂಟರ್’ ಆಗಿದ್ದು ಹೇಗೆ? ‘ಡಿಕೆಶಿ’ ಬೆಳೆದು ಬಂದ ಹಾದಿ ಹೇಗಿತ್ತು?

ಬೆಂಗಳೂರು : ಕನಕಪುರ ಬಂಡೆ, ಟ್ರಬಲ್ ಶೂಟರ್, ಒನ್ ಮ್ಯಾನ್ ಆರ್ಮಿ ಎಂಬಿತ್ಯಾದಿ ಹೆಸರುಗಳಿಂದ ನಾಮಾಂಕಿತರಾದ ಡಿ.ಕೆ ಶಿವಕುಮಾರ್ ವಿಪಕ್ಷಗಳಿಗೆ ಸಿಂಹಸ್ವಪ್ನವೇ ಸರಿ.

ಅಂದುಕೊಂಡದ್ದನ್ನು ಸಾಧಿಸಿಯೇ ತೀರುವ ಛಲದಂಕಮಲ್ಲ. ಹೀಗಾಗಿಯೇ, ಡಿಕೆಶಿಗೆ ಕರ್ನಾಟಕದ ಉಪಮುಖ್ಯಮಂತ್ರಿ ಸ್ಥಾನ ಒಲಿದುಬಂದಿದೆ. ಸ್ವಲ್ಪದರಲ್ಲೇ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕೈತಪ್ಪಿದೆ. ಆದರೂ, ಮುಂದಿನ ದಿನಗಳಲ್ಲಿ ಡಿಕೆಶಿ ಕರುನಾಡ ದೊರೆಯಾಗಿ ಪಟ್ಟ ಅಲಂಕರಿಸುವುದು ಪಕ್ಕಾ ಆಗಿದೆ.

ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಜೀವನ ಹೇಗಿತ್ತು? ಈವರೆಗೆ ಅವರು ಯಾವ? ಯಾವ ಸ್ಥಾನಗಳನ್ನು ಅಲಂಕರಿಸಿದ್ದರು. ಇಲ್ಲಿದೆ ಆ ಕುರಿತ ಮಾಹಿತಿ.

ಡಿಕೆಶಿ ಪ್ರಾರಂಭಿಕ ಜೀವನ

ಜನನ : ಮೇ 15, 1962

ಸ್ಥಳ : ಕನಕಪುರ ತಾಲೂಕು ದೊಡ್ಡಆಲಹಳ್ಳಿಯಲ್ಲಿ ಜನನ

ತಂದೆ : ಕೆಂಪೇಗೌಡ

ತಾಯಿ : ಗೌರಮ್ಮ

ಸಹೋದರ : ಡಿ.ಕೆ ಸುರೇಶ್

ಇದನ್ನೂ ಓದಿ : ಕನ್ನಡಿಗರ ಹಿತರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ : ಸಿದ್ದರಾಮಯ್ಯ

ಡಿಕೆಶಿ ರಾಜಕೀಯ ಜೀವನ

1981 : ಎನ್.ಎಸ್.ಯು.ಐ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ

1985 : ಸಾತನೂರಿನಲ್ಲಿ ಹೆಚ್.ಡಿ ದೇವೇಗೌಡರ ವಿರುದ್ಧ ಸೋಲು

1987 : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ

1989 : ಸಾತನೂರು ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ

1991 : ಎಸ್​. ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಸಚಿವ

1994 : ಕಾಂಗ್ರೆಸ್​ ಪಕ್ಷದ ಟಿಕೆಟ್​ ಮಿಸ್, ಬಂಡಾಯ ಅಭ್ಯರ್ಥಿಯಾಗಿ ಜಯ

1999 : ಸಾತನೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗೆಲುವು

1999 : ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಹಕಾರ ಮಂತ್ರಿ

2002 : ನಗರಾಭಿವೃದ್ಧಿ ಸಚಿವರಾಗಿ ಸೇವೆ

2004 : ಧರ್ಮಸಿಂಗ್ ಸರ್ಕಾರದಲ್ಲಿ ಡಿಕೆಶಿಗೆ ಸಿಗಲಿಲ್ಲ ಸಚಿವ ಸ್ಥಾನ

2013 : ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಇಂಧನ ಸಚಿವರಾಗಿದ್ರು

2018 : ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವ

2020 : ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನೇಮಕ

2023 : ಕಾಂಗ್ರೆಸ್​ ಪಕ್ಷವನ್ನುಅಧಿಕಾರಕ್ಕೆ ತಂದ ಡಿಕೆಶಿಗೆ ಡಿಸಿಎಂ ಸ್ಥಾನ

RELATED ARTICLES

Related Articles

TRENDING ARTICLES