Wednesday, January 22, 2025

ಜೆಡಿಎಸ್ ಸೋಲಿಸಿದ್ದಕ್ಕೆ ಮಂಡ್ಯ ಜನರಿಗೆ ಸುಮಲತಾ ಧನ್ಯವಾದ

ಬೆಂಗಳೂರು : ಜೆಡಿಎಸ್ ವಿರುದ್ಧ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್​​​ ಸಿಡಿದೆದಿದ್ದಾರೆ. ಜೆಡಿಎಸ್ ಸೋಲಿಸಿದ್ದಕ್ಕೆ ಮಂಡ್ಯ ಕ್ಷೇತ್ರದ ಜನರಿಗೆ ಟ್ವೀಟ್​​​ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ನನ್ನ ಸಮರ ಎಂದಿದ್ದ ಸಂಸದೆ ಸುಮಲತಾ ಅಂಬರೀಶ್ ಇದೀಗ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬಿಜೆಪಿಗೆ ಮತ ಹಾಕಿದ ಸರ್ವರಿಗೂ ಹಾಗೂ ಚುನಾವಣೆಯಲ್ಲಿ ಶ್ರಮಿಸಿದವರಿಗೆ ನನ್ನ ಕೃತಜ್ಞತೆಗಳು. ಗೆಲುವು ಹಾಗೂ ಸೋಲು ಚುನಾವಣೆಯ ಭಾಗವಾಗಿದೆ. ನಾವೂ ಧೈರ್ಯವನ್ನು ಕಳೆದುಕೊಳ್ಳದೇ ಇರುವುದು ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ಈ ಬಾರಿ ಭ್ರಷ್ಟ ಹಾಗೂ ದುರಹಂಕಾರಿ ಕುಟುಂಬ ರಾಜಕಾರಣದ ವಿರುದ್ಧ ನಿರ್ಣಾಯಕವಾಗಿ ಮತ ಚಲಾಯಿಸಿದ್ದಕ್ಕೆ ಮಂಡ್ಯ ಜನತೆಗೆ ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿ : ವರಿಷ್ಠರ ತಪ್ಪು ನಿರ್ಧಾರಗಳೇ ಬಿಜೆಪಿ ಸೋಲಿಗೆ ಕಾರಣ ; ರೇಣುಕಾಚಾರ್ಯ

ಮಂಡ್ಯದ ಅಭಿವೃದ್ದಿಗೆ ಕೆಲಸ

ಕೆ.ಆರ್ ನಗರವೂ ಸೇರಿದಂತೆ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಮಂಡ್ಯದ ಅಭಿವೃದ್ದಿಗಾಗಿ ತಾವೆಲ್ಲರೂ ಧನಾತ್ಮಕವಾಗಿ ಕೆಲಸ ಮಾಡಲಿದ್ದೀರಿ ಎನ್ನುವ ನಂಬಿಕೆ ಮತ್ತು ಹಾರೈಕೆ ನನ್ನದು ಎಂದು ಸುಮಲತಾ ಹೇಳಿದ್ದಾರೆ.

ಕರ್ನಾಟಕ ಜನತೆ ನೀಡಿರುವ ಜನಾದೇಶವನ್ನು ವಿನಮ್ರವಾಗಿ ನಾನು ಗೌರವಿಸುವೆ. ಜೆಡಿಎಸ್ ಸೋಲಿಸಿದ್ದಕ್ಕೆ ಧನ್ಯವಾದ ಎಂದು ಟ್ವೀಟ್​​​​​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES