ರಾಮನಗರ : ಒಕ್ಕಲಿಗರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತಿಗೆ ಮರಳಾಗಿ ಮತಹಾಕಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದ ಮಹದೇಶ್ವರ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನನ್ನದು 4ನೇ ಸೋಲು. ನಾನು ಗೆಲುವು ಸಾಧಿಸಲು ಬೇರೆ ಪಕ್ಷಗಳಿಗೆ ಹೋಗಬಹುದಿತ್ತು. ಸಾಕಷ್ಟು ಅಭಿಪ್ರಾಯವನ್ನ ಕ್ಷೇತ್ರದ ಮುಖಂಡರು ನನಗೆ ತಿಳಿಸಿದ್ದರು. ಒಂದು ಸಮುದಾಯ ಮತ ಹಾಕದಿರುವುದರಿಂದ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಪ್ರೀತಿ ವಿಶ್ವಾಸ ಗೆದ್ದಿದ್ದೇನೆ
ನಿಮ್ಮೆಲ್ಲರ ಶ್ರಮದಿಂದ 80ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದೇನೆ. ಕ್ಷೇತ್ರದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ಈ ಬಾರಿ ನನ್ನ ರಾಜಕೀಯ ಜೀವನದಲ್ಲಿ ಹೆಚ್ಚು ಮತ ಗಳಿಸಿದ್ದೇನೆ. ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ, ನಿಮ್ಮ ಪ್ರೀತಿ ವಿಶ್ವಾಸ ಗೆದ್ದಿದ್ದೇನೆ. ಯಾವುದೋ ಉದ್ದೇಶದಿಂದ ಸೋತಿರಬಹದು. ಆದರೆ, ಜನ ಯಾಕೆ ವೋಟ್ ಹಾಕಲಿಲ್ಲ ಎಂಬ ಪ್ರಶ್ನೆ ಉತ್ತರ ಸಿಗ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಸೋಲಿಸಿದ್ದಕ್ಕೆ ಮಂಡ್ಯ ಜನರಿಗೆ ಸುಮಲತಾ ಧನ್ಯವಾದ
ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಂದಿದ್ರು
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳವಣಿಗೆ ಗುಣಮಟ್ಟದಿಂದ ಆಗಬೇಕಿತ್ತು. ನನ್ನನ್ನು ಸ್ವತಂತ್ರವಾಗಿ ಸ್ಪರ್ಧೆಗೆ ಕೆಲವರು ಒತ್ತಾಯಿಸಿದ್ದರು. ಇನ್ನೂ ಕೆಲವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದರು. ಸೋತ ಬಳಿಕ ಸಾಕಷ್ಟು ವಿಶ್ಲೇಷಣೆ ನಡೆಯುತ್ತಿದೆ. ಆದರೆ, ಈಗಾಗಲೇ ಚುನಾವಣೆ ಮುಗಿದು ಸೋತಿದ್ದೇನೆ. ಆದರೆ, ನನ್ನ ಮೇಲೆ ಗೆದ್ದಿರುವವರು ಗೆದ್ದಿಲ್ಲ, ಸೋತಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿಕೆಗೆ ಸಿಪಿವೈ ಟಾಂಗ್ ಕೊಟ್ಟಿದ್ದಾರೆ.
ಅತಂತ್ರ ಆಗುತ್ತೆ ಅಂತ ಕಾಯ್ತಾ ಇದ್ರು
ಅವರು ಬಂದು ಕ್ಷೇತ್ರದಲ್ಲಿ ಕಣ್ಣೀರಿಟ್ಟರು. ಅತಂತ್ರ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ನನ್ನ ಮಗ ಕೊನೆಯದಾಗಿ ಸಿಎಂ ಆಗ್ತಾನೆ ಅಂತ ಅವ್ರ ಅಪ್ಪ ಆಸೆ ಇಟ್ಕೊಂಡಿದ್ರು. ಅದಕ್ಕೆ ಅತಂತ್ರ ಆಗುತ್ತೆ ಅಂತ ಸಿಂಗಾಪುರ್ ಗೆ ಹೋಗಿ ಕೂತಿದ್ರು. ಅದೇನೋ ಕಿಂಗ್ ಮೇಕರ್ ಅಂತೆ. ಈಗ ಯಾವ ಮೇಕರ್ ಆದ್ರೂ. ಈಗ ಕಾಂಗ್ರೆಸ್ ಗೆ ಬಹುಮತ ಬಂದಿದೆ ಎಂದು ಕುಟುಕಿದ್ದಾರೆ.
ಕುಮಾರಸ್ವಾಮಿ ಅವರು ಈ ತಾಲೂಕಿಗೆ ಬರಬಾರದಿತ್ತು. ನನಗೊಂದು, ನನ್ನ ಮಗನಿಗೊಂದು ಅಂತ ಸ್ವಂತ ತಾಲೂಕು ಬಿಟ್ಟು ಇಲ್ಲಿಗೆ ಬಂದರು. ಆದರೆ, ಅವರ ಸ್ವಂತ ತಾಲೂಕಿನಲ್ಲಿ ಅವರಿಗೆ ಸೋಲಾಯ್ತು ಎಂದು ಜೆಡಿಎಸ್ ವಿರುದ್ಧ ಸಿ.ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.