Monday, December 23, 2024

ಕೊನೆಗೂ ದೆಹಲಿಯತ್ತ ಡಿಕೆ ಶಿವಕುಮಾರ್ : ಇಂದೇ ಫೈನಲ್​ ಆಗುತ್ತಾ ಸಿಎಂ ಆಯ್ಕೆ..?

ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಈಗಲೇ ಫಲಿತಾಂಶ ಪ್ರಕಟಗೊಂಡು ಎರಡು ದಿನಗಳು ಕಳೆದಿದೆ. ಆದ್ರೆ, ಸಿಎಂ ಯಾರು ಎನ್ನುವುದೇ ಗೊಂದಲದ ಗೂಡು ಆಗಿದೆ.

ಹೌದು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಗೆ ಹಿಡಿದಿರುವ ಬಿಗಿ ಪಟ್ಟನ್ನು ಮಾತ್ರ  ಬಿಡುತ್ತಿಲ್ಲ,  ದಿನ ಕಳೆದಂತೆ ಮತ್ತಷ್ಟು ಬಿಗಿಯಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.

ಹೀಗಾಗಿ ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವ ಫೈಟ್, ಈಗ ದಿಲ್ಲಿಗೆ ಶಿಫ್ಟ್ ತಲುಪಿದ್ದು,ಕಗ್ಗಂಟು ಬಗೆಹರಿಸುವ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮೇಲಿದೆ.

ಈಗಲೇ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರೆ ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಟ್ಟೆ ನೋವಿನ ಕಾರಣ ಹೇಳಿ ಬೆಂಗಳೂರಲ್ಲೇ ಉಳಿದಿದ್ದಾರೆ. ಇದೀಗ ಮತ್ತೆ ಡಿಕೆ ಶಿವಕುಮಾರ್​ ಇಂದು ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ.

ಇಂದು ಬೆಳಗ್ಗೆ ಡಿಕೆ ಶಿವಕುಮಾರ್​ ನವದೆಹಲಿಗೆ ತೆರಳಿ ಸೋನಿಯಾ ಗಾಂಧಿ ಭೇಟಿಯಾಗಲಿದ್ದಾರೆ. ಶಿಮ್ಲಾದಿಂದ ಸೋನಿಯಾ ಗಾಂಧಿ ಬರುವ ವೇಳೆಗೆ ದೆಹಲಿ ತಲುಪಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಮುಂದಿನ ಸಿಎಂ ಯಾರು ಎನ್ನುವ ಘೋಷಣೆ ಹೊರ ಬೀಳುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES