Monday, December 23, 2024

ನೀನೆ ನನ್ನ ಹೀರೋ, ನೀವು ಸಿಎಂ ಕುರ್ಚಿಯಲ್ಲಿ ಕೂರುವಂತಾಗಲಿ : ಡಿಕೆಶಿ ಪುತ್ರಿ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದಿದ್ದು, ಡಿಕೆಶಿಗೆ ಸಿಎಂ ಆಸೆ ಚಿಗುರೊಡೆದಿದೆ. ಈ ಸಂದರ್ಭದಲ್ಲೇ ಪುತ್ರಿ ಐಶ್ವರ್ಯಾ ಶಿವಕುಮಾರ್ ತಂದೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಪುತ್ರಿ ಐಶ್ವರ್ಯಾ, ‘ನೀನೆ ನನ್ನ ಹೀರೋ, ನಿಮ್ಮಂಥ ತಂದೆಯನ್ನು ಪಡೆದ ನಾನೇ ಧನ್ಯಳು’ ಎಂದು ಬರೆದುಕೊಂಡಿದ್ದಾರೆ.

‘ಪ್ರತಿದಿನ ಬೆಳಗ್ಗೆ ‘ಮಗಳೇ’ಎನ್ನುವ ಶಬ್ದವನ್ನು ಕೇಳಿದ ತಕ್ಷಣ ನಿಜವಾದ ಪ್ರೀತಿ ಎಂದರೆ ಇದೇ ಇರಬೇಕು ಎನಿಸುತ್ತಿತ್ತು ಮಗಳೇ ಎನ್ನುವ ಪದ ನನ್ನನ್ನು ಸ್ಟ್ರಾಂಗೆಸ್ಟ್ ವುಮೆನ್ ಆಗಿ ಬದಲಾಗಲು ಪ್ರೇರೇಪಿಸುತಿತ್ತು ನಿಮ್ಮಂಥ ತಂದೆಯನ್ನು ಪಡೆದ ನಾನೇ ಧನ್ಯಳು. ಈ ಕೆಟ್ಟ ಪ್ರಪಂಚದಿಂದ ನನ್ನನ್ನು ಪ್ರತಿ ಕ್ಷಣ ರಕ್ಷಿಸುತ್ತಿದ್ದೀರಿ’ ಎಂದು ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೇಳಿದ್ದಾರೆ.

ಇದನ್ನೂ ಓದಿ : ‘ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ’ : ಡಿಕೆಶಿ ಕೊಟ್ಟ ಸಂದೇಶ ಏನು?

ಅಪ್ಪ ಸಿಎಂ ಕುರ್ಚಿಯಲ್ಲಿ ಕೂರಲಿ

ಇನ್ನೂ ಸಿಎಂ ಸ್ಥಾನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ತಂದೆ ಹಾಗೂ ಚಿಕ್ಕಪ್ಪ ಇಬ್ಬರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಮುಂದೀಗ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲಿದೆ. ಈ ಸನ್ನಿವೇಶ ನೋಡಿದರೆ ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ದೇವರು ಆಶೀರ್ವದಿಸಿದರೆ ಜನರ ಇಚ್ಚೆಯಂತೆ ಅಪ್ಪ ಸಿಎಂ ಕುರ್ಚಿಯಲ್ಲಿ ಕೂರುವಂತಾಗಲಿ. ಹೀಗಾದಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯವನ್ನು ಅವರು ಮಾಡಲು ಸಹಕಾರಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಡಿಕೆಶಿ ಹುಟ್ಟುಹಬ್ಬಕ್ಕೆ ಶುಭಾಶಯ

ಇನ್ನೂ ನಿನ್ನೆ ಡಿ.ಕೆ ಶಿ​ವಕುಮಾರ್ ಅವರ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ಮಗಳು ಐಶ್ವರ್ಯಾ ತಂದೆಯ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದರು. ‘ನಿಮ್ಮಂಥ ತಂದೆಯನ್ನು ಪಡೆದಿದ್ದು ನನ್ನ ಪುಣ್ಯ. ನನ್ನ ಜೀವನದಲ್ಲಿ ನೀವು ಹೀರೋ. ಅಪ್ಪ ಐ ಲವ್​ ಯೂ’ ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

RELATED ARTICLES

Related Articles

TRENDING ARTICLES