ಬೆಂಗಳೂರು : ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಲೆಂದು ಅಭಿಮಾನಿಯೊಬ್ಬ 35 ಕಿ.ಮೀ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.
ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದ್ದು, ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಸಿದ್ದು ಅಭಿಮಾನಿ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆದಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಮನ್ನಿಕೇರಿ ಗ್ರಾಮದ ಸುರೇಶ್ ಅವರೇ ಅಭಿಮಾನ ಮೆರೆದ ಸಿದ್ದು ಅಭಿಮಾನಿ. ಇವರು ಅಪ್ಪಟ ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಗದ್ದುಗೆ ಏರಬೇಕು ಎಂದು ಅಭಿಮಾನಿ ಸುರೇಶ್ ತಮ್ಮ ಮನ್ನಿಕೇರಿ ಗ್ರಾಮದಿಂದ ಕೂಡಲ ಸಂಗಮದವರೆಗೆ ಬರೋಬ್ಬರಿ 35 ಕೀಮೀ ದೀರ್ಘ ದಂಡ ನಮಸ್ಕಾರ ಹಾಕಿದ್ದಾನೆ.
ಇದನ್ನೂ ಓದಿ : ಬಪ್ಪರೆ ಗಂಡೇ : ‘ಸಿದ್ದು ಸಿಎಂ ಆಗದಿದ್ರೆ ಮೀಸಿ ಬೋಳಿಸ್ತಿನಿ’
‘ಕೈ‘ ಅಭ್ಯರ್ಥಿ ಗೆಲುವಿಗಾಗಿ ಹರಕೆ
ಸುರೇಶ್ ನ ಅಭಿಮಾನಕ್ಕೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದ್ದು, ವಾದ್ಯಮೇಳದೊಂದಿಗೆ ಕೂಡಲ ಸಂಗಮದವರೆಗೂ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಬೆಳಿಗ್ಗೆ ೪ ಗಂಟೆಗೆ ದೀರ್ಘದಂಡ ನಮಸ್ಕಾರ ಸಹಿತ ಪಾದಯಾತ್ರೆ ಹೊರಟಿರೋ ಸುರೇಶ್ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ ಮೇಟಿ ಗೆಲುವಿಗಾಗಿಯೂ ಹರಕೆ ಹೊತ್ತಿದ್ದರು. ಮೇಟಿ ಗೆಲುವು ಕಂಡಿರೋ ಬೆನ್ನಲ್ಲೆ ಸಿದ್ದು ಸಿಎಂ ಆಗಲೆಂದು ಹಾರೈಸಿ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
1100 ತೆಂಗಿನ ಕಾಯಿ
ಸಿದ್ದು ಸಿಎಂ ಆಗಲೆಂದು 1100 ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಗಿದೆ. ಬೀದರ್ ನ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕುರುಬಗೊಂಡ ಸಮುದಾಯದಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಯಾವುದೇ ಅಡೆತಡೆ ಇಲ್ಲದೇ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ರಾಜ್ಯ ಪ್ರದಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ನೇತೃತ್ವದಲ್ಲಿ ಹರಕೆ ತೀರಿಸಲಾಗಿದೆ.