ಬೆಂಗಳೂರು : ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ‘ಯಂಗ್ ಗನ್’ ಶುಭ್ಮನ್ ಗಿಲ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಬಾರಿಸಿದರು.
ಐಪಿಎಲ್ನ 62ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವೃದ್ದಿಮಾನ್ ಸಾಹ ಶೂನ್ಯಕ್ಕೆ(0) ವಿಕೆಟ್ ಒಪ್ಪಿಸಿದ್ದರು.
22 ಎಸೆತಗಳಲ್ಲಿ ಅರ್ಧಶತಕ
ಬಳಿಕ ಶುಭ್ಮನ್ ಗಿಲ್ ಜೊತೆಯಾದ ಸಾಯಿ ಸುದರ್ಶನ್ ಉತ್ತಮ ಜೊತೆಯಾಟವಾಡಿದರು. ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಸುದರ್ಶನ್ ಜೊತೆಗೂಡಿ 2ನೇ ವಿಕೆಟ್ಗೆ 147 ರನ್ಗಳ ಜೊತೆಯಾಟವಾಡಿದರು. ಸನ್ರೈಸರ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ಚಚ್ಚಿದ ಗಿಲ್ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 56 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು.
That HUNDRED feeling 🤗
Follow the match ▶️ https://t.co/GH3aM3hyup #TATAIPL | #GTvSRH | @ShubmanGill pic.twitter.com/C9UyUBvHd1
— IndianPremierLeague (@IPL) May 15, 2023
ಇದನ್ನೂ ಓದಿ : ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ : 13 ಬಾಲ್ ನಲ್ಲೇ ಅರ್ಧಶತಕ
5 ವಿಕೆಟ್ ಪಡೆದು ಮಿಂಚಿದ ಭುವಿ
ಗಿಲ್ ಸ್ಫೋಟಕ ಶತಕ (101) ಹಾಗೂ ಸಾಯಿ ಸುದರ್ಶನ್ 47 ರನ್ ಗಳಿಸುವ ಮೂಲಕ ಸಿಡಿಸಿ ಗುಜರಾತ್ ತಂಡಕ್ಕೆ ಬಲ ತುಂಬಿದರು. ಉಳಿದ 9 ಬ್ಯಾಟರ್‌ಗಳು ಒಂದಂಕಿ ದಾಟುವಲ್ಲಿ ವಿಫಲರಾದರು. ಗುಜರಾತ್ 9 ವಿಕೆಟ್ ನಷ್ಟಕ್ಕೆ 188 ರನ್ ಕಲೆಹಾಕಿತು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 5 ವಿಕೆಟ್ ಪಡೆದು ಮಿಂಚಿದರು.
.@BhuviOfficial claimed a fantastic five-wicket haul for the second time in his IPL career as he becomes our 🔝 performer from the first innings of the #GTvSRH clash in the #TATAIPL 👌🏻
A look at his bowling summary 🔽 pic.twitter.com/64fKWnDaea
— IndianPremierLeague (@IPL) May 15, 2023
W,W,W,1,W,1B : ತೂಫಾನ್ ಬೌಲಿಂಗ್
ಇನ್ನಿಂಗ್ಸ್ ನ ಕೊನೆಯ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ತೂಫಾನ್ ಬೌಲಿಂಗ್ ಗೆ ಗುಜರಾತ್ ಬ್ಯಾಟರ್ ಗಳು ಸ್ಟನ್ ಆದರು. 20ನೇ ಓವರ್ ನಲ್ಲಿ ಭುವಿ ನಾಲ್ಕು ವಿಕೆಟ್ ಕಬಳಿಸಿದರು. ಆದರೆ, ಹ್ಯಾಟ್ರಿಕ್ ಸಾಧನೆ ಮಿಸ್ ಆಯಿತು. ಆರಂಭಿಕ ಆಟಗಾರ ಶುಭ್ ಮನ್ ಗಿಲ್, ಆಲ್ ರೌಂಡರ್ ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡಿದರೆ, ನೂರ್ ಅಹ್ಮದ್ ರನೌಟ್ ಆಗಿ ಪೆವಿಲಿಯನ್ ಪೆರೇಡ್ ನಡೆಸಿದರು.