Sunday, November 3, 2024

REWIND : 8 ವರ್ಷದ ಹಿಂದೆ ‘ಶಿವಕುಮಾರ ಶ್ರೀಗಳಿಗೆ ಒಲಿದಿತ್ತು ಪದ್ಮಭೂಷಣ’

ಬೆಂಗಳೂರು : 13 ಮೇ 2015. ಲಿಂಗೈಕ್ಯ ‌ಶಿವಕುಮಾರ‌ ಸ್ವಾಮೀಜಿಗಳಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದ ದಿನ. ಇಂದಿಗೆ ಎಂಟು ವರ್ಷಗಳು ಉರುಳಿವೆ.

ಹೌದು, ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.

2015ರ ಏಪ್ರಿಲ್‌ ತಿಂಗಳಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪದ್ಮ ಪ್ರಶಸ್ತಿಗಳನ್ನು ದೆಹಲಿಯಲ್ಲಿ ಪ್ರದಾನ ಮಾಡಿದ್ದರು. ಆಗ ಶಿವಕುಮಾರ ಸ್ವಾಮಿಗಳು(108 ವರ್ಷ ಆಗಿತ್ತು) ದೆಹಲಿಗೆ ತೆರಳು ಸಾಧ್ಯವಾಗದ ಕಾರಣ ಸರ್ಕಾರದ ಪರವಾಗಿ ಮೇ 13ರಂದು ಶ್ರೀಮಠದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಉಮೇಶ್ ಅವರು ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ಆಗಿನ ತುಮಕೂರು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ : ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಡಿ.ಕೆ ಶಿವಕುಮಾರ್

ನಾನೆಂದೂ ಪ್ರಶಸ್ತಿಗಾಗಿ ಆಸೆ ಪಟ್ಟಿಲ್ಲ

ಪ್ರಶಸ್ತಿ ಸ್ವೀಕರಿಸಿದ ನಂತರ ಸಂದೇಶ ನೀಡಿದ್ದ ಲಿಂ.ಶಿವಕುಮಾರ ಸ್ವಾಮೀಜಿಗಳು, ‘ಮನುಷ್ಯನಿಗೆ ಪ್ರಶಸ್ತಿ ಮುಖ್ಯವಲ್ಲ. ಪ್ರಶಸ್ತಿ ಪಡೆಯುವುದರಿಂದ ಘನತೆ, ಗೌರವ ಹೆಚ್ಚಾಗುವುದಿಲ್ಲ. ನಾನೆಂದೂ ಪ್ರಶಸ್ತಿಗಾಗಿ ಆಸೆ ಪಟ್ಟಿಲ್ಲ. ಸರ್ಕಾರ ನೀಡಿರುವ ಪ್ರಶಸ್ತಿಯನ್ನು ಸ್ವೀಕರಿಸಿರುವೆ’ ಎಂದು ಹೇಳಿದ್ದರು.

ಜನರು ಪರೋಪಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಕರೆ ನೀಡಿದ್ದರು. ನಡೆದಾಡುವ ದೇವರಿಗೆ ಎಂಟು ವರ್ಷಗಳ ಹಿಂದೆ ಪದ್ಮಭೂಷಣ ಲಭಿಸಿರುವ ಬಗ್ಗೆ ಶ್ರೀಮಠವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

RELATED ARTICLES

Related Articles

TRENDING ARTICLES