Wednesday, January 22, 2025

‘ಆಪರೇಷನ್ ಕಮಲ’ಕ್ಕೆ ಬಲಿಯಾದರಲ್ಲಿ ಸೋತವರೇ ಹೆಚ್ಚು, ಗೆದ್ದಿದ್ದು ಯಾರು?

ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹಲವು ನಾಯಕರು ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. ಅವರಿಗೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಿದ್ದಾರೆ.

ಬಿಜೆಪಿ ಸರ್ಕಾರ ಬರಲು ಡಾ. ಕೆ ಸುಧಾಕರ್, ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್, ಮಹೇಶ್ ಕುಮಟಳ್ಳಿ ಹೀಗೆ ಹಲವು ಘಟಾನುಘಟಿ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ಇವರಲ್ಲಿ ಅನೇಕರು ಸೋಲು ಅನುಭವಿಸಿದ್ದಾರೆ.

ಸೋಲು ಕಂಡವರು

ಚಿಕ್ಕಬಳ್ಳಾಪುರ : ಡಾ.ಕೆ ಸುಧಾಕರ್

ಹಿರೇಕೆರೂರು : ಬಿ.ಸಿ ಪಾಟೀಲ್

ಮಸ್ಕಿ : ಪ್ರತಾಪ್ ಗೌಡ ಪಾಟೀಲ್

ಅಥಣಿ : ಮಹೇಶ್ ಕುಮಟಳ್ಳಿ, ಲಕ್ಷ್ಮಣ್ ಸವದಿಗೆ ಗೆಲುವು

ಕಾಗವಾಡ : ಶ್ರೀಮಂತ್ ಬಾಳಾಸಾಹೇಬ್ ಪಾಟೀಲ

ಕೆ.ಆರ್ ಪೇಟೆ : ಕೆ.ಸಿ ನಾರಾಯಣಗೌಡ

ಹೊಸಕೋಟೆ : ಎಂಟಿಬಿ ನಾಗರಾಜ್

ವಿಜಯನಗರ : ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್ ಸೋಲು

ಗೆಲುವು ಸಾಧಿಸಿದವರು

ಯಲ್ಲಾಪುರ : ಶಿವರಾಮ ಹೆಬ್ಬಾರ್

ಯಶವಂತಪುರ : ಎಸ್.​ಟಿ ಸೋಮಶೇಖರ್

ಕೆ.ಆರ್​ ಪುರ : ಬೈರತಿ ಬಸವರಾಜ್

ಮಹಾಲಕ್ಷ್ಮಿ ಲೇಔಟ್ : ಕೆ. ಗೋಪಾಲಯ್ಯ

ರಾಜರಾಜೇಶ್ವರಿನಗರ : ಮುನಿರತ್ನ

ಗೋಕಾಕ : ರಮೇಶ್ ಜಾರಕಿಹೊಳಿ

RELATED ARTICLES

Related Articles

TRENDING ARTICLES