Wednesday, January 22, 2025

ನನ್ನ ಕ್ಷೇತ್ರ ಚಿನ್ನದಂತೆ ಇತ್ತು, ಹೈಕಮಾಂಡ್ ಹೇಳಿತೆಂದು ಹೋದೆ ; ವಿ.ಸೋಮಣ್ಣ ಭಾವುಕ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಫಲಿತಾಂಶ (Karnataka Assembly Elections 2023 Result) ನಿನ್ನೆ ಬಂದಿದ್ದು, ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್​ ಸರ್ಕಾರ ರಚನೆ ಮಾಡಲಿದೆ.

ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರದಲ್ಲಿ ಸ್ಪರ್ಧಿಸಿ, ಸೋತಿದ್ದ ವಿ.ಸೋಮಣ್ಣ(V Somanna) ಸುದ್ದಿಗಾರರೊಂದಿಗೆ ಮತನಾಡಿ ‘ಸೋತಾಗಿದೆ, ಏನು ಮಾತಾಡಲಿ..? ಮಾತಾಡೋದು ಅಗತ್ಯ ಇಲ್ಲ. ಸೋತಿದ್ದೇನೆ ಅಷ್ಟೇ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದ್ದೆ ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದಿದ್ದಾರೆ ಎಂದು ಭಾವುಕರಾಗಿದ್ದಾರೆ.

ಚಾಮರಾಜನಗರ ವರುಣಾದಲ್ಲೂ ಸೋಲು ಕಂಡ ವಿ ಸೋಮಣ್ಣ

ಚಾಮರಾಜನಗರವು ರಾತ್ರೋರಾತ್ರಿ ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊರಹೊಮ್ಮಿತ್ತು. ರಾಜಧಾನಿ ಹೃದಯ ಭಾಗದ ಸ್ವಕ್ಷೇತ್ರ ಗೋವಿಂದರಾಜನಗರವನ್ನ ಬಿಟ್ಟು ಚಾಮರಾಜನಗರ ಕ್ಷೇತ್ರದಲ್ಲಿ ಕಮಲ ಅರಳಿಸಲು ಸಚಿವ ವಿ ಸೋಮಣ್ಣ ಅಖಾಡಕ್ಕಿಳಿದಿದ್ದರು. ಆದರೆ ಸೋಲುಂಡಿದ್ದಾರೆ. ಇನ್ನು ವರುಣಾದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿದ್ದ ವಿ ಸೋಮಣ್ಣ50,122 ಮತಗಳನ್ನ ಪಡೆದು ಸೋತಿದ್ದಾರೆ.

RELATED ARTICLES

Related Articles

TRENDING ARTICLES