Wednesday, January 22, 2025

ವೋಟ್ ಹಾಕಿಲ್ಲ ಅಂತ ‘ದೊಡ್ಡಪ್ಪನನ್ನೇ ಕೊಂದ ಮಗ’

ಬೆಂಗಳೂರು : ಚುನಾವಣೆಯಲ್ಲಿ ವೋಟ್ ಹಾಕಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ ಹೊಸಕೋಟೆ ಹೊಸಕೋಟೆ ತಾಲೂಕಿನ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಪ್ಪನನ್ನೇ ತಮ್ಮನ ಮಗ ಕೊಲೆ ಮಾಡಿದ್ದಾನೆ. ಕೃಷ್ಣಪ್ಪ ಕೊಲೆಯಾದ ದುರ್ದೈವಿ.

ಕಳೆದ ರಾತ್ರಿ ಚುನಾವಣೆ ಸೋಲಿನ ವಿಚಾರಕ್ಕೆ ಶುರುವಾಗಿದ್ದ ಕಿರಿಕ್ ಕೊಲೆಯಲ್ಲಿ ಮುಗಿದಿದೆ. ವೋಟ್ ಹಾಕಿಲ್ಲ ಅನ್ನೂ ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಜಗಳ ಶುರುವಾಗಿತ್ತು. ಗ್ರಾಮದ ಕೃಷ್ಣಪ್ಪ ಮತ್ತು ಗಣೇಶಪ್ಪ ಎಂಬುವವರ ನಡುವೆ ಗಲಾಟೆ ನಡೆದಿತ್ತು.

ಇದನ್ನೂ ಓದಿ : ಗಂಡ ‘ಚಾಕೋಲೆಟ್’ ತರದಿದ್ದಕ್ಕೆ ಹೆಂಡ್ತಿ ಆತ್ಮಹತ್ಯೆ

ಈ ವೇಳೆ ಗಣೆಶಪ್ಪನ ಮಗ ಆದಿತ್ಯಾ ಎಂಬುವವನು ಕೃಷ್ಣಪ್ಪ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾಂಗ್ರೆಸ್​ 135, ಬಿಜೆಪಿ 66

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ 135 ಸ್ಥಾನ ಪಡೆದಿದೆ. ಬಿಜೆಪಿ 66, ಜೆಡಿಎಸ್​194,ಇತರರು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

RELATED ARTICLES

Related Articles

TRENDING ARTICLES