Sunday, January 19, 2025

ಮೈಸೂರು ಜಿಲ್ಲೆಯಲ್ಲಿ ಗೆದ್ದವರು ಯಾರು? ಯಾರಿಗೆ ಎಷ್ಟು ಬಲ?

ಮೈಸೂರು : ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ ಯಾರೂ ಊಹಿಸದ ಫಲಿತಾಂಶ ಹೊರಬಿದ್ದಿದೆ. ಮತದಾರರ ನಿರ್ಧಾರಕ್ಕೆ ಸ್ವತಃ ಕಾಂಗ್ರೆಸ್‌ ಕೂಡ ಶಾಕ್ ಆಗಿದೆ.

ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್‌ 2 ಹಾಗೂ ಬಿಜೆಪಿ 1 ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿವೆ.

ಬಿಜೆಪಿಯ ಆಡಳಿತ ವಿರೋಧಿ ಅಲೆ, ಜೆಡಿಎಸ್‌ ನಾಯಕತ್ವದ ಕೊರತೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಭರ್ಜರಿ ಫಸಲು ಬಂದಿದೆ. ಈ ಬಾರಿ ಕಾಂಗ್ರೆಸ್‌ 5 ಹೆಚ್ಚು ಸ್ಥಾನ ಪಡೆದರೆ, ಜೆಡಿಎಸ್‌ 3 ಹಾಗೂ ಬಿಜೆಪಿ 2 ಸ್ಥಾನಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ : ಏಳು ಸುತ್ತಿನ ಕೋಟೆಗೆ ‘ಕೈ’ ಲಗ್ಗೆ : 6ರಲ್ಲಿ 5 ಸ್ಥಾನ ಗೆದ್ದ ಕಾಂಗ್ರೆಸ್

ಎಲ್ಲಿ ಯಾರು ಗೆದ್ದರು? ಯಾರು ಸೋತರು?

  1. ಹುಣಸೂರು

ಜೆಡಿಎಸ್-ಜಿ.ಡಿ ಹರೀಶ್ ಗೌಡ-94666 (ಗೆಲುವು)

ಕಾಂಗ್ರೆಸ್-ಎಚ್.ಪಿ ಮಂಜುನಾಥ್-92254

ಬಿಜೆಪಿ-ದೇವರಹಳ್ಳಿ ಸೋಮಶೇಖರ್‌-6258

ಗೆಲುವಿನ ಅಂತರ-2412

  1. ಚಾಮರಾಜ

ಕಾಂಗ್ರೆಸ್-ಕೆ. ಹರೀಶ್ ಗೌಡ್-72931(ಗೆಲುವು)

ಬಿಜೆಪಿ-ಎಲ್.ನಾಗೇಂದ್ರ-68837

ಜೆಡಿಎಸ್-ರಮೇಶ್-4549.

ಗೆಲುವಿನ ಅಂತರ-4094

  1. ಪಿರಿಯಾಪಟ್ಟಣ

ಕಾಂಗ್ರೆಸ್-ಕೆ.ವಂಕಟೇಶ್-85944(ಗೆಲುವು)

ಜೆಡಿಎಸ್-ಕೆ.ಮಹದೇವ್-66269

ಬಿಜೆಪಿ-ಸಿ.ಎಚ್.ವಿಜಯಶಂಕರ್-7373

ಗೆಲುವಿನ ಅಂತರ-19675

  1. ಎಚ್.ಡಿ ಕೋಟೆ

ಕಾಂಗ್ರೆಸ್-ಅನಿಲ್ ಚಿಕ್ಕಮಾದು-84359(ಗೆಲುವು)

ಬಿಜೆಪಿ-ಕೃಷ್ಣ ನಾಯಕ-49420

ಜೆಡಿಎಸ್-ಜಯಪ್ರಕಾಶ್ ಚಿಕ್ಕಣ್ಣ-43519.

ಗೆಲುವಿನ ಅಂತರ-34939

5.ಕೃಷ್ಣರಾಜ

ಬಿಜೆಪಿ-ಟಿ.ಎಸ್. ಶ್ರೀ ವತ್ಸ-73670(ಗೆಲುವು)

ಕಾಂಗ್ರೆಸ್-ಎಂ.ಕೆ ಸೋಮಶೇಖರ್- 66457

ಜೆಡಿಎಸ್-ಕೆ.ವಿ ಮಲ್ಲೇಶ್-5027

ಗೆಲುವಿನ ಅಂತರ-7213

  1. ಟಿ.ನರಸೀಪುರ ಕ್ಷೇತ್ರ

ಕಾಂಗ್ರೆಸ್-ಡಾ.ಎಚ್.ಸಿ ಮಹದೇವಪ್ಪ-77884 (ಗೆಲುವು)

ಜೆಡಿಎಸ್-ಅಶ್ವಿನ್ ಕುಮಾರ್.ಎಂ-59265

ಬಿಜೆಪಿ-ಡಾ.ಎಂ.ರೇವಣ್ಣ-20389

ಗೆಲುವಿನ ಅಂತರ-18619

  1. ಕೆಆರ್.ನಗರ

ಕಾಂಗ್ರೆಸ್-ಡಿ.ರವಿಶಂಕರ್-103084(ಗೆಲುವು)

ಜೆಡಿಎಸ್-ಸಾ.ರಾ.ಮಹೇಶ್-77261

ಗೆಲುವಿನ ಅಂತರ-25823

  1. ನಂಜನಗೂಡು

ಕಾಂಗ್ರೆಸ್-ದರ್ಶನ್-108582(ಗೆಲುವು)

ಬಿಜೆಪಿ-ಹರ್ಷವರ್ಧನ್-61114

ಗೆಲುವಿನ ಅಂತರ-47468

  1. ಚಾಮುಂಡೇಶ್ವರಿ

ಜೆಡಿಎಸ್-ಜಿಟಿ.ದೇವೇಗೌಡ-103917(ಗೆಲುವು)

ಕಾಂಗ್ರೆಸ್-ಮಾವಿನಹಳ್ಳಿ-ಸಿದ್ದೇಗೌಡ-78730

ಬೊಜೆಪಿ-ಕವೀಶ್‌ಗೌಡ-50807

ಗೆಲುವಿನ ಅಂತರ-25287

  1. ನರಸಿಂಹರಾಜ

ಕಾಂಗ್ರೆಸ್-ತನ್ವೀರ್‌ಸೇಠ್-82893(ಗೆಲುವು)

ಬಿಜೆಪಿ-ಸಂದೇಶ್ ಸ್ವಾಮಿ-51802

ಗೆಲುವಿನ ಅಂತರ-31091

  1. ವರುಣ

ಕಾಂಗ್ರೆಸ್-ಸಿದ್ದರಾಮಯ್ಯ-119430(ಗೆಲುವು)

ಬಿಜೆಪಿ-ವಿ.ಸೋಮಣ್ಣ-73424

ಗೆಲುವಿನ ಅಂತರ-46006

RELATED ARTICLES

Related Articles

TRENDING ARTICLES