Monday, December 23, 2024

ಇತಿಹಾಸ ಸೃಷ್ಟಿ : 5 ಬಾರಿ ಶಾಸಕರಾಗಿ ಆರಗ ಜ್ಞಾನೇಂದ್ರ ಆಯ್ಕೆ

ಬೆಂಗಳೂರು : ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಈ ಬಾರಿಯ ಗೆಲುವಿನೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಸತತ 10ನೇ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿಇತಿಹಾಸ ಸೃಷ್ಟಿಸಿದ ಆರಗ ಜ್ಞಾನೇಂದ್ರ 5 ನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಕ್ಷೇತ್ರದ ರಾಜಕಾರಣದಲ್ಲಿ ಆರಗ ಜ್ಞಾನೇಂದ್ರ ಅನೇಕ ದಾಖಲೆಗಳನ್ನು ಸೃಷ್ಟಿಸಿದ ಕೀರ್ತಿ ಸಂಪಾದಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿಆರಗ ಜ್ಞಾನೇಂದ್ರ 84,563 ಮತ ಪಡೆದು ಎದುರಾಳಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್‌ ಅವರನ್ನು 12,241 ಮತಗಳಿಂದ ಮಣಿಸಿ ಗೆದ್ದರು ಎಂಬ ಸುದ್ದಿ ತಿಳಿಯುತ್ತಲೇ ಕ್ಷೇತ್ರದಲ್ಲಿ ಬಿಜೆಪಿ ಕಾರ‍್ಯಕರ್ತರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಇದನ್ನೂ ಓದಿ : ಕಾಂಗ್ರೆಸ್ ಗೆಲುವು : ಪ್ರಧಾನಿ ಮೋದಿ ಅಭಿನಂದನೆ

ಆರಗ ಜ್ಞಾನೇಂದ್ರ ಅವರು ತೆರೆದ ವಾಹನದಲ್ಲಿ ಗಾಜನೂರಿನಿಂದ ತೀರ್ಥಹಳ್ಳಿವರೆಗೆ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ದಾರಿಯುದ್ದಕ್ಕೂ ಮುಖಂಡರು, ಕಾರ್ಯಕರ್ತರು, ಮತದಾರರಿಂದ ಅಭಿನಂದನೆ ಸ್ವೀಕರಿಸಿದರು. ಮೆರವಣಿಗೆಗೆ ಸೇರಿದ್ದ ಭಾರೀ ಸಂಖ್ಯೆಯ ಕಾರ್ಯಕರ್ತರು ಆರಗ ಜ್ಞಾನೇಂದ್ರ ಗೆಲುವನ್ನು ಸಂಭ್ರಮಿಸಿದರು.

ಗೃಹ ಸಚಿವರಾಗಿ ಸೇವೆ

ಕಳೆದ ಬಾರಿಯ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಆರಗ ಜ್ಞಾನೇಂದ್ರ ಅವರು ಗೃಹ ಸಚಿವ ಖಾತೆ ಪಡೆದಿದ್ದರು. ಸಚಿವರಾಗಿ ಹಲವು ಏಳು ಬೀಳು ಕಂಡಿದ್ದ ಅವರಿಗೆ ಈ ಬಾರಿಯ ಗೆಲುವು ಅಷ್ಟು ಸಲುಭವಾಗಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿ ಅಂತಿಮವಾಗಿ 12,241 ಮತಗಳಿಂದ ಗೆದ್ದಿದ್ದಾರೆ.

RELATED ARTICLES

Related Articles

TRENDING ARTICLES