Thursday, December 26, 2024

ಇದು ಸೋಲಲ್ಲ, ನನ್ನ ಮೊದಲ ಗೆಲುವು : ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ಈ ಫಲಿತಾಂಶವನ್ನು ಎಲ್ಲರೂ ಸ್ವಾಗತಿಸೋಣ. ಇದು ಸೋಲಲ್ಲ, ನನ್ನ ಮೊದಲ ಗೆಲುವು ಎಂದು ಶಿಡ್ಲಘಟ್ಟ ಬಿಜೆಪಿ ಪರಾಜಿತ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕ್ಷೇತ್ರದ ಜನತೆ ಹಾಗೂ ಮಾಧ್ಯಮ ಮಿತ್ರರಿಗೆ ಅಭಿನಂದನೆ ಸಲ್ಲಿಸಿದರು.

ಸುಮಾರು ಎರಡು ಮೂರು ತಿಂಗಳುಗಳಿಂದ ಸತತವಾಗಿ ನನಗೆ ಮತ್ತು ನಮ್ಮ ಪಕ್ಷಕ್ಕೆ ಸಹಕರಿಸಿದ್ದೀರ ಮತ್ತು ಮತಬಾಂಧವರಿಗೆ ಸುದ್ದಿ ಮುಟ್ಟಿಸಿದ್ದೀರಿ. ನಿರೀಕ್ಷೆ ಮೀರಿ ನಿರೀಕ್ಷೆ ಇಲ್ಲದೇ ಇರತಕ್ಕಂತಹ ಫಲಿತಾಂಶ ಬಂದಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌, ಇತರೆ ಯಾರೇ ಇರಬಹುದು, ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ಇದು ರಾಜ್ಯದ ಮತಬಾಂಧವರ ತೀರ್ಮಾನ. ಅವರ ಹಕ್ಕು ಎಂದರು.

16 ಸಾವಿರ ಮತ ಕೊಟ್ಟಿದ್ದಾರೆ

ಯಾರಿಗೆ ಬೆಂಬಲ ಕೊಡಬೇಕು. ಯಾರಿಗೆ ಕೊಟ್ರೆ ಏನಾಗುತ್ತೆ ಅನ್ನೋದು ಅವರ ಸ್ವ-ಇಚ್ಚೇಗೆ ಬಿಟ್ಟಿದ್ದು. ಇದನ್ನು ಎಲ್ಲರೂ ಸ್ವಾಗತಿಸಬೇಕು. ಆ ನಿಟ್ಟಿನಲ್ಲಿ ನಾವು ಕೂಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಬಿಜೆಪಿ ಇಂದ ಅವಕಾಶ ಮಾಡಿಕೊಟ್ಟಿದ್ದರು. ತುಂಬಾ ಕಡಿಮೆ ಅವಧಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಮಗೆ ಅಪಾರ ಬೆಂಬಲ ಕೊಟ್ಟು ಸುಮಾರು 15 ರಿಂದ 16 ಸಾವಿರ ಮತಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಸೀಕಲ್ ರಾಮಚಂದ್ರಗೌಡರಿಂದ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ

45 ದಿನಕ್ಕೆ 16 ಸಾವಿರ ಮತ

ತಾಳೆ ಹಾಕಿ ನೋಡಿದರೆ ಪಕ್ಷೇತರ ಇರಬಹುದು, ಕಾಂಗ್ರೆಸ್‌ ಇರಬಹುದು, ಜೆಡಿಎಸ್‌ ಇರಬಹುದು ಅಥವಾ ಬಿಜೆಪಿಗೆ ಏನು ಮತಬಾಂಧವರು ಆಶೀರ್ವಾದ ಮಾಡಿದ್ದಾರೆ. ಅದೂ 5-10 ವರ್ಷಗಳಿಂದ ಮಾಡ್ತಾ ಇರುವ ಸೇವೆಗೆ 50-60 ಸಾವಿರ ಮತ ನೀಡಿದ್ದಾರೆ. ನಾವು ಕೇವಲ 45 ದಿನಗಳಲ್ಲಿ ಮಾಡಿದ ಸೇವೆಗೆ ಕೊಟ್ಟಿರುವ ಮತ ನಮಗೆ ತೃಪ್ತಿ ನೀಡಿದೆ. 10 ವರ್ಷ ಸೇವೆಗೆ 60 ಸಾವಿರ ಮತ, 45 ದಿನಕ್ಕೆ 16 ಸಾವಿರ ಮತ ನಮಗೆ ಸಂತೋಷ ನೀಡಿದೆ ಎಂದು ತಿಳಿಸಿದರು.

ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ

ಬೆಂಬಲ ಏನು ಕೊಟ್ಟಿದ್ದಾರೆ, ಇವತ್ತು ಜನ ಏನು ತೀರ್ಮಾನ ಮಾಡಿದ್ದಾರೆ. ಅದು ಮುಂದಿನ ಚುನಾವಣೆಗೆ ಸಾಕಷ್ಟು ಸಮಯ ಇದೆ. 5 ವರ್ಷ ಸತತವಾಗಿ ಸೇವೆ ಮಾಡಿ, ಪಕ್ಷ ಕಟ್ಟುವಂತಹ ಕೆಲಸ ಮಾಡ್ತೀವಿ. ಮತ್ತೆ ಜನರ ಬಳಿ ಬೆಂಬಲ ಕೇಳಿ, ಪಕ್ಷ ಕಟ್ಟಿ, ಪಕ್ಷವನ್ನು ಗಟ್ಟಿ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಕೆಲಸವನ್ನು ನಿರಂತರವಾಗಿ ಮಾಡ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಸೀಕಲ್‌ ಆನಂದ ಗೌಡ ಹಾಗೂ ಬಿಜೆಪಿ ಮುಖಂಡರು ಇದ್ದರು.

RELATED ARTICLES

Related Articles

TRENDING ARTICLES