Wednesday, January 22, 2025

‘ಕರ್ನಾಟಕದಲ್ಲಿ ದ್ವೇಷದ ಬಾಗಿಲು ಬಂದ್’ ಆಗಿದೆ : ರಾಹುಲ್ ಗಾಂಧಿ

ಬೆಂಗಳೂರು : ಕರ್ನಾಟಕದಲ್ಲಿ ದ್ವೇಷದ ಬಾಗಿಲು ಬಂದ್ ಆಗಿದೆ. ಪ್ರೀತಿಯ ಹೆಬ್ಬಾಗಿಲು ತೆರೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು, ಭರ್ಜರಿಯಾಗಿ ಮುನ್ನಡೆ ಸಾಧಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ನಾನು ಮೊದಲಿಗೆ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಕರ್ನಾಟಕದಲ್ಲಿ ರಾಜಕೀಯ ಹಿತಾಸಕ್ತಿಯ ಬಂಡವಾಳಶಾಹಿಗಳನ್ನು ಜನರು ಸೋಲಿಸಿದ್ದಾರೆ. ದ್ವೇಷವನ್ನು ಬಳಸಿ ನಾವು ಈ ಯುದ್ಧ ಮಾಡಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಐದು ಘೋಷಣೆಗಳನ್ನು ಮಾಡಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ : ‘ಅಬ್ ಕಿ ಬಾರ್ ಡಿಕೆ’ ಸರ್ಕಾರ್ : ಬೆಂಬಲಿಗರ ಘೋಷಣೆ

ಸತ್ಯಮೇವ ಜಯತೆ

ಕರ್ನಾಟಕದ ಮಹಾಜನತೆ ನಮಗೆ ನೀಡಿದ ಈ ಸಂಭ್ರಮಕ್ಕೆ ನಾವು ಋಣಿಯಾಗಿದ್ದೇವೆ. ಉತ್ತಮ ಜನಪರ ಆಡಳಿತದ ಮೂಲಕ ಕನ್ನಡಿಗರ ಋಣ ತೀರಿಸುತ್ತೇವೆ. ಸತ್ಯಮೇವ ಜಯತೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

40% ಭ್ರಷ್ಟಾಚಾರದ ವಿರುದ್ಧ ಕನ್ನಡಿಗರ 100% ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ, ಅಭಿಮಾನ, ಪ್ರೀತಿ ತೋರಿಸಿ ಮತ ಚಲಾಯಿಸಿದ ಕನ್ನಡಿಗರೆಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದು ಹೇಳಿದೆ.

RELATED ARTICLES

Related Articles

TRENDING ARTICLES