Friday, November 22, 2024

ವಾಂಖೆಡೆಯಲ್ಲಿ ‘ಸೂರ್ಯ ಸ್ಫೋಟ’ : 49 ಬಾಲ್ ನಲ್ಲೇ ಭರ್ಜರಿ ಶತಕ ಸಿಡಿಸಿದ SKY

ಬೆಂಗಳೂರು : ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ 49 ಬಾಲ್ ನಲ್ಲೇ ಭರ್ಜರಿ ಶತಕ ಸಿಡಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧರ ಪಂದ್ಯದಲ್ಲಿ ಮುಂಬೈ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮತ್ತೊಮ್ಮೆ ಘರ್ಜಿಸಿದರು. 49 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ ಅಜೇಯ 103 ರನ್ ಸಿಡಿಸಿದರು.

ಇದು ಸೂರ್ಯ ಕುಮಾರ್ ಐಪಿಎಲ್‌ನಲ್ಲಿ ಹೊಡೆದ ಚೊಚ್ಚಲ ಶತಕವಾಗಿದೆ. ಮೊದಲ 32 ಎಸೆತಗಳಲ್ಲಿ 50 ರನ್ ಸಿಡಿಸಿದ ಸೂರ್ಯ ಅರ್ಧ ಶತಕದ ಬಳಿಕ ಮತ್ತಷ್ಟು ಅಬ್ಬರಿಸಿದರು. ಕೇವಲ 17 ಎಸೆತಗಳಲ್ಲಿ 53 ರನ್ ಚಚ್ಚಿದರು. ಗುಜರಾತ್ ಬೌಲರ್​ಗಳ ಬೆಂಡೆತ್ತಿದ ಸೂರ್ಯಕುಮಾರ್ ಯಾದವ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು.

ಅಭಿಮಾನಿಗಳು ಫಿದಾ

ಸೂರ್ಯ ಕುಮಾರ್ ಆಟಕ್ಕೆ SKY ಹಾಗೂ ಮುಂಬೈ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ 7 ಇನ್ನಿಂಗ್ಸ್ ಗಳಲ್ಲಿ ಸೂರ್ಯ 68.33 ಸರಾಸರಿ ಹಾಗೂ 202.45 ಸ್ಟ್ರೈಟ್ ರೇಟ್ ನೊಂದಿಗೆ 413 ರನ್ ಗಳಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 479 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಪಂಜಾಬ್ ವಿರುದ್ಧ 57 (26)

ಗುಜರಾತ್ ವಿರುದ್ಧ 23 (12)

ರಾಜಸ್ಥಾನ್ ವಿರುದ್ಧ 55 (29)

ಪಂಜಾಬ್ ವಿರುದ್ಧ 66 (31)

ಚೆನ್ನೈ ವಿರುದ್ಧ 26 (22)

ಆರ್ ಸಿಬಿ ವಿರುದ್ಧ 83 (35)

ಗುಜರಾತ್ ವಿರುದ್ಧ 103* (49)

ಜಿಟಿಗೆ 219 ರನ್ ಟಾರ್ಗೆಟ್

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಆರಂಭಿಕ ಆಟಗಾರ ಇಶಾನ್ ಕಿಶನ್ 31, ನಾಯಕ ರೋಹಿತ್ ಶರ್ಮಾ 29 ಮತ್ತು ವಿಷ್ಣು 30 ರನ್ ಗಳಿಸಿದರು. ಗುಜರಾತ್ ಪರ ರಶೀದ್ ಖಾನ್ 4 ವಿಕೆಟ್ ಪಡೆದರು. ಮೋಹಿತ್ ಶರ್ಮಾ 1 ವಿಕೆಟ್ ಪಡೆದರು.

ಇದನ್ನೂ ಓದಿ : ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ : 13 ಬಾಲ್ ನಲ್ಲೇ ಅರ್ಧಶತಕ

ಐಪಿಎಲ್‌ನಲ್ಲಿ ರೋಹಿತ್ 200 ಸಿಕ್ಸರ್

ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅಪರೂಪದ ಮೈಲುಗಲ್ಲು ತಲುಪಿದ್ದಾರೆ. ಮುಂಬೈ ತಂಡದ ಪರವಾಗಿ 200 ಸಿಕ್ಸರ್ ಬಾರಿಸಿದ ಆಟಗಾರ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮೊದಲ ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ ಅವರು 200 ಸಿಕ್ಸರ್ ಮೈಲುಗಲ್ಲು ತಲುಪಿದರು. ಐಪಿಎಲ್‌ನಲ್ಲಿ ಒಟ್ಟಾರೆ 250ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ರೋಹಿತ್ ಬಾರಿಸಿದ್ದಾರೆ.

 

ಹೆಚ್ಚು ಸಿಕ್ಸರ್ ಬಾರಿಸಿರುವವರು

ಕ್ರಿಸ್ ಗೇಲ್ : 357

ರೋಹಿತ್ ಶರ್ಮಾ : 252

ಎಬಿ ಡೆವಿಲಿಯರ್ಸ್‌ :251

ಎಂ.ಎಸ್ ಧೋನಿ : 239

RELATED ARTICLES

Related Articles

TRENDING ARTICLES