Wednesday, January 22, 2025

ಡೋಂಟ್ ವರಿ.. ಅತಂತ್ರ ಬಂದ್ರೆ ಕುಮಾರಸ್ವಾಮಿ ಇದಾರಲ್ಲ : ಸತೀಶ್ ಜಾರಕಿಹೊಳಿ

ಬೆಂಗಳೂರು : ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದರೆ ಮೈತ್ರಿಗೆ ನಾವು ಸಿದ್ದ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅತಂತ್ರ ಬಂದ್ರೆ ಕುಮಾರಸ್ವಾಮಿ ಇದಾರಲ್ಲ ಎಂದು ಹೇಳಿದ್ದಾರೆ.

ನಮ್ಮ ಲೆಕ್ಕದಲ್ಲಿ ಬಹುಮತದ ಕೊರತೆ ಆಗಲ್ಲ. ಆದರೂ ಅವರು ಬೆಂಬಲ ಕೊಟ್ಟರೇ ಒಳ್ಳೆಯದಾಗುತ್ತೆ. ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರದ್ದು, ಹೆಚ್​.ಡಿ ಕುಮಾರಸ್ವಾಮಿಯವರದ್ದು ಸಲಹೆ ಇದ್ದರೆ ಒಳ್ಳೆಯದು. ಒಳ್ಳೆಯ ಸರ್ಕಾರ ಆಡಳಿತ ಮಾಡಲು ಒಳ್ಳೆಯದಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ‘ಕುಮಾರಣ್ಣನೇ ಕಿಂಗ್ ಮೇಕರ್’ : ಸಿಎಂ ಇಬ್ರಾಹಿಂ ಟಕ್ಕರ್

ಆಪರೇಶನ್ ಕಮಲ ಮಾಡಲಿಕ್ಕೆ ಬಹಳ ಗ್ಯಾಪ್ ಇದೆ. ಅಷ್ಟು ಸುಲಭವಲ್ಲ ಸುಮಾರು 30ರಿಂದ 40 ಸೀಟು ಬೇಕಾಗಬಹುದು. ಅಷ್ಟು ಸೀಟು ಬೇರೆ ಪಕ್ಷದಿಂದ ತೆಗೆದುಕೊಳ್ಳೋದು ಅಸಾಧ್ಯ. ಬಿಜೆಪಿಯವರು ಆಪರೇಷನ್ ಕಮಲ ಮಾಡೋದು ಹಗಲುಗನಸು. ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟು ಬರಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಸಲಹೆ ನೀಡೋದು ಸೂಕ್ತ. ಬಿಜೆಪಿ 75 ರಿಂದ 80ರ ಮೇಲೆ ಹೋಗಲ್ಲ ಎಂದು ಎಲ್ಲರೂ ಹೇಳಿದ್ದಾರೆ. ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ. ರಾಜ್ಯದಲ್ಲಿ ಸಾಕಷ್ಟು ವರದಿಗಳು ಕಾಂಗ್ರೆಸ್ ಪರವಾಗಿ ಬಂದಿವೆ. ರಾಜ್ಯದಲ್ಲಿ 120ಕ್ಕೂ ಅಧಿಕ ಕಾಂಗ್ರೆಸ್ ಸೀಟುಗಳು ಬರುತ್ತವೆ. ಜಿಲ್ಲೆಯಲ್ಲಿ 10 ಕಾಂಗ್ರೆಸ್ ಸೀಟು ಬರುತ್ತವೆ ಎಂದು ಹೇಳಿದ್ದೇವೆ, ಗೆಲ್ಲುತ್ತೇವೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES