Thursday, December 19, 2024

ಸಚಿವ ಸುನೀಲ್ ಕುಮಾರ್ ಆಪ್ತನಿಂದ ಗೂಂಡಾಗಿರಿ

ಬೆಂಗಳೂರು : ಬಿಜೆಪಿ ಸಚಿವ ಹಾಗೂ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಆಪ್ತನಿಂದಲೇ ಗೂಂಡಾಗಿರಿ ನಡೆದಿದೆ.

ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಸುನಿಲ್​ ಕುಮಾರ್​ ಆಪ್ತ ಸುಮಿತ್ ನಲ್ಲೂರು ಎಂಬುವವರು ಗೂಂಡಾಗಿರಿ ಮಾಡಿದ್ದಾರೆ.

ಸೀಟ್ ಬೆಲ್ಟ್ ಹಾಕುವಂತೆ ಸೂಚಿಸಿದ್ದಕ್ಕೆ ಕುಪಿತಗೊಂಡ ಸುಮಿತ್ ನಲ್ಲೂರು, ಪೋಲಿಸ್ ಅಧಿಕಾರಿಗೆ ಆವಾಜ್ ಹಾಕಿ ದರ್ಪ ಮೆರೆದಿದ್ದಾರೆ. ಕಾರ್ಕಳ ಬಜಗೋಳಿ ಚೆಕ್ ಪೋಸ್ಟ್​ನಲ್ಲಿ ಪೊಲೀಸರ ಮೇಲೆ ಸುಮಿತ್ ನಲ್ಲೂರು ಗೂಂಡಾ ವರ್ತನೆ ತೋರಿದ್ದಾರೆ.

ಇದನ್ನೂ ಓದಿ : ಚುನಾವಣೆ ಮುಗಿದ ಬೆನ್ನಲ್ಲೇ ಪವರ್ ಶಾಕ್ : ಪ್ರತಿ ಯೂನಿಟ್ ಗೆ 70 ಪೈಸೆ ಹೆಚ್ಚಳ

ದೇವರ ಮೊರೆ ಹೋದ ಸಚಿವ

ನಾಳಿನ ಫಲಿತಾಂಶ ಬಗ್ಗೆ ಸಚಿವ ವಿ. ಸುನೀಲ್ ಕುಮಾರ್ ಅವರಿಗೆ ಡವಡವಶುರುವಾಗಿದ್ದು, ದೇವರ ಮೊರೆ ಹೋಗಿದ್ದಾರೆ. ಟೆಂಪಲ್‌ ರನ್ ಮಾಡಿದ ಸುನಿಲ್ ಕುಮಾರ್, ಕಾರ್ಕಳ ಐತಿಹಾಸಿಕ ಮಾರಿಗಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಸೀರೆ ಕೊಟ್ಟು ಪ್ರಸಾದ ಸ್ವೀಕರಿಸಿದ್ದಾರೆ. ಪ್ರಮೋದ್ ಮುತಾಲಿಕ್ ಸ್ಪರ್ಧೆಯಿಂದ ಸುನೀಲ್ ಕುಮಾರ್ ಅವರಿಗೆ ಸೋಲಿನ ಸಂಕಷ್ಟ ಎದುರಾಗಿದೆ.

ನಕಲಿ ಮತದಾನಕ್ಕೆ ಕುಮ್ಮಕ್ಕು

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರೇ ಕಾರ್ಕಳ ಕ್ಷೇತ್ರದಲ್ಲಿ ನಕಲಿ ಮತದಾನಕ್ಕೆ ಕುಮ್ಮಕ್ಕು ನೀಡಿದ್ದಾರೆ. ಸೋಲಿನ ಸುಳಿಯಲ್ಲಿರುವ ಭ್ರಷ್ಟ, ಮಾನಗೆಟ್ಟ ಸಚಿವರ ಅಸಂಸ್ಕೃತ ವರ್ತನೆ ಅನಾವರಣ ಮಾಡಿದೆ. ಆಡಳಿತದಲ್ಲೂ ಭ್ರಷ್ಟಾಚಾರ, ಈಗ ಮತದಾನದಲ್ಲೂ ಸಚಿವ ಸುನೀಲ್ ಕುಮಾರ್ ಭ್ರಷ್ಟಾಚಾರಕ್ಕಿಳಿದಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಸಮಾಜ ಮಂದಿರ ಮತಗಟ್ಟೆ 155 ರಲ್ಲಿ ನಡೆದ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES