Sunday, January 19, 2025

‘ರಾಜ್ಯದಲ್ಲಿ ಕಮಲ’ ಅರಳಿಸಲು ಕೇಸರಿ ಕಲಿಗಳ ರಣತಂತ್ರ

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಸುದ್ದಿ ವಾಹಿನಿಗಳ ಬಹುತೇಕ ಸರ್ವೆಗಳಲ್ಲಿ ಅತಂತ್ರ ಸರ್ಕಾರ ರಚನೆಯಾಗುವ ಸೂಚನೆ ಸಿಕ್ಕಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ರಹಸ್ಯ ಸಭೆಯನ್ನು ನಡೆಸಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ರಹಸ್ಯ ಮಾತುಕತೆ ನಡೆಸಿದ್ದು ತಂತ್ರಗಾರಿಕೆ ಹೆಣೆದಿದ್ದಾರೆ. ಈ ಬಾರಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಕ್ಷೇತ್ರದ ಬಗ್ಗೆ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಸಮಾಲೋಚನೆ ಮಾಡಿದ್ದಾರೆ.

ಇದನ್ನೂ ಓದಿ : ‘ಹಳೇ ಮೈಸೂರು ಕಬ್ಜ’ ಮಾಡೋದು ಯಾರು? : ಹೀಗಿದೆ ಸ್ಟಾರ್ ವಾರ್ ಕಿಕ್

ಯಡಿಯೂರಪ್ಪ ಒಬ್ಬೊಬ್ಬರಿಗೂ ಒಂದೊಂದು ಟಾಸ್ಕ್​ ನೀಡಿದ್ದಾರೆ. ಇದಲ್ಲದೆ ಒಂದು ವೇಳೆ ಅತಂತ್ರ ಸರ್ಕಾರ ರಚನೆಯಾದರೆ ಆಪರೇಷನ್​ ಕಮಲಕ್ಕೆ ಸ್ಕೆಚ್​ ಹಾಕಲಾಗಿದೆ. ಇನ್ನೂ, ರೆಸಾರ್ಟ್ ರಾಜಕೀಯ ಅನಿವಾರ್ಯ ಆದ್ರೆ ರೆಸಾರ್ಟ್ ಕೂಡ ಸೂಚನೆ ನೀಡಲಾಗಿದೆ. ರೆಸಾರ್ಟ್ ಬುಕ್ ಮಾಡಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಪಕ್ಷೇತರರಿಗೆ ಗಾಳ ಹಾಕಲು ಸ್ಕೆಚ್

ಇನ್ನೂ ಪಕ್ಷೇತರವಾಗಿ ಗೆಲ್ಲುವ ಸಾಧ್ಯತೆ ಇದ್ದವರಿಗೆ ಗಾಳ ಹಾಕಲು ಸ್ಕೆಚ್​ ಹಾಕಿದ್ದಾರೆ. ಬಿಜೆಪಿ ಗೆಲ್ಲಬಹುದಾ ಸಂಭಾವ್ಯ ಪಕ್ಷೇತರ ಶಾಸಕರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರೇ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಸ್ಥಳಿಯ ನಾಯಕರಿಗೂ ಪಕ್ಷೇತರರ ಜೊತೆ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES