Monday, December 23, 2024

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ : 13 ಬಾಲ್ ನಲ್ಲೇ ಅರ್ಧಶತಕ

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲ ನಡೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಕೇವಲ 13 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಜೈಸ್ವಾಲ್ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

ಕನ್ನಡಿಗ ಕೆ.ಎಲ್ ರಾಹುಲ್ ಅವರು ಈ ಹಿಂದೆ 2018ರಲ್ಲಿ ಡೆಲ್ಲಿ ತಂಡದ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ದಾಖಲೆ ನಿರ್ಮಿಸಿದ್ದರು. 2022ರಲ್ಲಿ ಬ್ಯಾಟ್ ಕಮಿನ್ಸ್ ಅವರು ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ಮೊದಲ ಓವರ್ ನಲ್ಲೇ 26 ರನ್

ಜೈಸ್ವಾಲ್ ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತದಿಂದಲೇ ಆರ್ಭಟಿಸಿದರು. ಮೊದಲ ಓವರ್​ನಲ್ಲೇ ಬರೋಬ್ಬರಿ 26 ರನ್ ಚಚ್ಚಿದರು. ಕೆಕೆಆರ್ ನಾಯಕ ನಿತೀಶ್ ರಾಣಾ ಬೌಲ್ ಮಾಡಿದ ಈ ಓವರ್ನಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು.

ಇದನ್ನೂ ಓದಿ : ಜಡೇಜಾ ಹೊಸ ದಾಖಲೆ : ಈ ಸಾಧನೆ ಮಾಡಿದ 8ನೇ ಕ್ರಿಕೆಟಿಗ ಜಡ್ಡು

ಐಪಿಎಲ್ ನಲ್ಲಿ ವೇಗದ ಅರ್ಧಶತಕಗಳು

ಯಶಸ್ವಿ ಜೈಸ್ವಾಲ್ : 13 ಎಸೆತಗಳು (ಕೋಲ್ಕತ್ತಾ)

ಕೆ.ಎಲ್.ರಾಹುಲ್ : 14 ಎಸೆತಗಳು (ಡೆಲ್ಲಿ)

ಪ್ಯಾಟ್ ಕಮಿನ್ಸ್ : 14 ಎಸೆತಗಳು (ಮುಂಬೈ)

ಯುಸೂಫ್ ಪಠಾಣ್ : 15 ಎಸೆತಗಳು (ಹೈದರಾಬಾದ್)

ಸುನಿಲ್ ನರೈನ್ : 15 ಎಸೆತಗಳು (ಆರ್‌ಸಿಬಿ)

ನಿಕೋಲಸ್ ಪೂರನ್ : 15 ಎಸೆತಗಳು (ಆರ್‌ಸಿಬಿ)

ಸುರೇಶ್ ರೈನಾ : 16 ಎಸೆತಗಳು (ಪಂಜಾಬ್)

ಇಶಾನ್ ಕಿಶನ್ : 16 ಎಸೆತಗಳು (ಹೈದಾರಾಬಾದ್)

ಟಿ-20 ಪಂದ್ಯದಲ್ಲಿ ವೇಗದ ಅರ್ಧಶತಕಗಳು

ಯುವರಾಜ್ ಸಿಂಗ್ (Yuvraj Singh): 12 ಎಸೆತಗಳು(2007)

ಕ್ರಿಸ್ ಗೇಲ್ (Chris Gayle): 12 ಎಸೆತಗಳು(2016)

ಹಜರತುಲ್ಲಾ ಝಜೈ (Hazratullah Zazai): 12 ಎಸೆತಗಳು(2018)

ಸುನಿಲ್ ನರೈನ್ (Sunil Narine): 13 ಎಸೆತಗಳು (2022)

ಯಶಸ್ವಿ ಜೈಸ್ವಾಲ್ (Yashasvi Jaiswal): 13 ಎಸೆತಗಳು (2023*)

RELATED ARTICLES

Related Articles

TRENDING ARTICLES