Wednesday, January 22, 2025

Vote Counting : ಮತ ಏಣಿಕೆ ಪ್ರಕ್ರಿಯೆ ಹೇಗಿರುತ್ತೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕೋಟ್ಯಂತರ ಮತದಾರರನ್ನು ಹೊಂದಿರುವ ಕರ್ನಾಟದಲ್ಲಿಯೂ ಮತ ಎಣಿಕೆ ಕರ್ನಾಟಕದಲ್ಲಿ ಸುಲಭದ ಮಾತು ಅಲ್ಲ. ರಾಜಕೀಯದ ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಅಗುವುದು ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ.

ಹೌದು, ವಿಧಾನಸಭೆ ಚುನಾವಣೆ ನಿನ್ನೆಮುಕ್ತಾಯವಾಗಿದ್ದು, ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್​​ನಲ್ಲಿ ಇಡಲಾಗಿದೆ. ಅದನ್ನು  11ರ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಆರಂಭವಾಗಲಿದೆ. ಹಾಗದ್ದರೆ ನಾವು ಅದಕ್ಕೂ ಮುಂಚೆ ನಾವು ಮತ ಏಣಿಕೆಯನ್ನು ಹೇಗೆಲ್ಲಾ ಮಾಡುತ್ತಾರೆ ಎಂಬುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮತ ಏಣಿಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

ಮತ ಎಣಿಕೆ ಹೇಗೆ ನಡೆಯುತ್ತದೆ?

  • ಬಹು ಟೇಬಲ್‌ಗಳನ್ನು ಹೊಂದಿರುವ ದೊಡ್ಡ ಸಭಾಂಗಣದಲ್ಲಿ ಮತಗಳನ್ನು ಎಣಿಸಲಾಗುತ್ತದೆ
  • ಜನಸಂದಣಿ ಹೆಚ್ಚಾಗುವ ಅವಕಾಶವಿದ್ದಲ್ಲಿ ಚುನಾವಣಾ ಆಯೋಗ (ಇಸಿ) ಹೆಚ್ಚಿನ ಸಂಖ್ಯೆಯ ಕೊಠಡಿಗಳನ್ನು ಒದಗಿಸುತ್ತದೆ
  • ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ
  • ಹೆಚ್ಚಾಗಿ, ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳನ್ನು ಮತ ಎಣಿಕೆ ಕೇಂದ್ರಗಳಾಗಿ ಬಳಸಲಾಗುತ್ತದೆ

 ಮತ ಎಣಿಕೆಯ ಸ್ಥಳ ಆಯ್ಕೆ ಮುಖ್ಯ

  • ವಿಧಾನಸಭಾ ಕ್ಷೇತ್ರದ ನಿರ್ದಿಷ್ಟ ಒಂದು ಸ್ಥಳದಲ್ಲಿ ಮತ ಎಣಿಕೆ ಮಾಡಲಾಗುತ್ತದೆ
  • ಬಹು ವಿಧಾನಸಭಾ ಕ್ಷೇತ್ರಗಳೊಂದಿಗೆ ಸೀಟುಗಳ ಸಂಖ್ಯೆಯೂ ಹೆಚ್ಚಾಗಿದ್ದರೆ, ಮತಗಳ ಸಂಖ್ಯೆಯನ್ನು ಆಧರಿಸಿ ಹೆಚ್ಚಿನ
  • ಎಣಿಕೆ ಕೇಂದ್ರಗಳನ್ನು ನೀಡಲಾಗುತ್ತದೆ
  • ಮತ ಎಣಿಕೆ ಮಾಡುವ ಸ್ಥಳವನ್ನು ರಿಟರ್ನಿಂಗ್ ಆಫೀಸರ್ ಅಥವಾ ಚುನಾವಣಾಧಿಕಾರಿ (RO) ಘೋಷಿಸುತ್ತಾರೆ
  • ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ ಅಥವಾ ಸಹಾಯಕ ಚುನಾವಣಾಧಿಕಾರಿ (ARO) ಅವರು ಅನೇಕ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ

ಹೇಗಿರಲಿದೆ ಎಣಿಕೆ ಪ್ರಕ್ರಿಯೆ?

  • ಚುನಾವಣಾಧಿಕಾರಿ (RO) ಅವರ ಮೇಲ್ವಿಚಾರಣೆಯಲ್ಲಿ ಎಣಿಕೆ ಪ್ರಾರಂಭವಾಗುತ್ತದೆ
  • ಎಣಿಕೆ ಸಿಬ್ಬಂದಿಯನ್ನು ನೇಮಿಸಿದ ನಂತರ ಮೂರು-ಹಂತದ ಎಣಿಕೆ ಪ್ರಕ್ರಿಯೆಯು ಸಾಮಾನ್ಯವಾಗಿ ನಡೆಯುತ್ತವೆ
  • ಚುನಾವಣಾ ಏಜೆಂಟರೊಂದಿಗೆ ಅಭ್ಯರ್ಥಿಗಳಿಗೂ ತಮ್ಮ ಮತ ಎಣಿಕೆ ಏಜೆಂಟರ ಜೊತೆ ಎಣಿಕೆ ಕೇಂದ್ರದಲ್ಲಿರಲು ಅವಕಾಶ ನೀಡಲಾಗುತ್ತದೆ
  • ಮೊದಲ ಹಂತದಲ್ಲಿ ಅಂಚೆಮತಗಳ ಎಣಿಕೆ ಮಾಡಲಾಗುತ್ತದೆ. 30 ನಿಮಿಷಗಳ ನಂತರ ವಿದ್ಯುನ್ಮಾನ ಮತಯಂತ್ರದ ಮತಗಳ ಎಣಿಕೆ ಪ್ರಾರಂಭವಾಗುತ್ತದೆ

ಮತ ಎಣಿಕೆಯ ಸಮಯದ ವಿವರ

  • ಅಧಿಕೃತ ಎಣಿಕೆ ಸಮಯ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ
  • ಚುನಾವಣಾಧಿಕಾರಿಗಳು ಮತ್ತು ಮತ ಎಣಿಕೆ ಏಜೆಂಟರನ್ನು ರಾಜಕೀಯ ಪಕ್ಷಗಳು ನೇಮಿಸಿದ್ದು, ಅಭ್ಯರ್ಥಿಗಳು ಬೆಳಗ್ಗೆ 5 ಗಂಟೆಯ ಮೊದಲು ಕೇಂದ್ರಗಳನ್ನು ತಲುಪುತ್ತಾರೆ.
  • ಬೆಳಿಗ್ಗೆ 6 ಗಂಟೆಯೊಳಗೆ ಎಣಿಕೆ ಟೇಬಲ್‌ಗಳಲ್ಲಿ ತಮ್ಮ ಸ್ಥಾನಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಹೀಗೆ ನಾವು ಮಾಡಿದ ಮತವನ್ನು ಏಣಿಕೆ ಮಾಡುತ್ತಾರೆ.

 

 

RELATED ARTICLES

Related Articles

TRENDING ARTICLES