Sunday, January 19, 2025

31 ಸಾವಿರ ಬೂತ್ ಗಳಲ್ಲಿ ಬಿಜೆಪಿಗೆ ಮುನ್ನಡೆ : ಅಂಕಿಅಂಶ ಬಿಚ್ಚಿಟ್ಟ ಬಿ.ಎಲ್ ಸಂತೋಷ್

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಬಹಿರಂಗವಾದ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಎಂದು ಹೇಳಿವೆ. ಆದರೆ, ಸಮೀಕ್ಷೆಯ ಫಲಿತಾಂಶವನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ.

ಈ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು 31 ಸಾವಿರ ಬೂತ್ ಗಳಲ್ಲಿ ಮುನ್ನಡೆ ಸಾಧಿಸಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ರಾಮನ ಸೇನೆ ಶ್ರೀರಾಮನಿಗಾಗಿ ಯುದ್ಧವನ್ನು ಗೆದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಬೂತ್‌ ಸಮಿತಿ ಕಾರ್ಯಕರ್ತರು ಮತ್ತು ಪೇಜ್ ಪ್ರಮುಖರು ಚುನಾವಣೆ ಎಂಬ ಯುದ್ಧದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರತಿ ಬೂತ್‌ ನಲ್ಲೂ ಬಿಜೆಪಿ ಗೆಲ್ಲಲಲಿದೆ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟ್ವಿಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ : ಸಿದ್ದರಾಮಯ್ಯ ಹೀಗೊಂದು ಮನವಿ

ದೇಶದ ರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಸಮೀಕ್ಷೆ 2014ರಲ್ಲಿ 282 ಅಥವಾ 2019ರಲ್ಲಿ 303 ಸೀಟುಗಳು, 2022ರಲ್ಲಿ 156 ಬರುತ್ತವೆ ಎಂದು ಭವಿಷ್ಯ ನುಡಿದಿರಲಿಲ್ಲ. 2018ರಲ್ಲಿ 104 ಬರುತ್ತವೆ ಎಂದೂ ಹೇಳಿರಲಿಲ್ಲ ಎನ್ನುವ ಮೂಲಕ ಮತಗಟ್ಟೆ ಸಮೀಕ್ಷೆ ಫಲಿತಾಂಶವನ್ನು ತಳ್ಳಿಹಾಕಿದ್ದಾರೆ.

2018ರಲ್ಲಿ 24 ಸಾವಿರ ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಬಾರಿ 31 ಸಾವಿರ ಬೂತ್‌ಗಳಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಆ ಸಂಖ್ಯೆ ಎಷ್ಟು ಎಂದು ನೀವೇ ಊಹಿಸಿಕೊಳ್ಳಿ ಎಂದು ಬಿ.ಎಲ್ ಸಂತೋಷ್ ಅವರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES