ನಟಿ ಅಮೂಲ್ಯ ಕೂಡ ತಮ್ಮ ಅಮೂಲ್ಯವಾದ ಮತವನ್ನುಇಂದು ಮುಂಜಾನೆ ಬೆಂಗಳೂರಿನ ಆರ್ಆರ್ ನಗರದಲ್ಲಿ ಅವರು ಮತ ಚಲಾವಣೆ ಮಾಡಿದ್ದಾರೆ.

ಇಂದು ಬೆಳಗ್ಗೆಯೇ ನಟಿ ಮೇಘನಾ ಗಾಂವ್ಕರ್ ಬಂದು ಮತದಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ವೋಟ್ ಮಾಡಿದ ನಟಿ ಮೇಘನಾ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನಟಿ ಮಿಲನ ನಾಗರಾಜ್ ತಮ್ಮ ಅಮೂಲ್ಯವಾದ ಮತವನ್ನು ಚಲಾವಣೆ ಮಾಡಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಸಂಯುಕ್ತ ಹೊರನಾಡು ಹಾಗೂ ತಾಯಿ ಸುಧಾ ಬೆಳವಾಡಿ ಇಬ್ಬರೂ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇಬ್ಬರೂ ವೋಟ್ ಮಾಡಿದ ಬಳಿಕ ಸೆಲ್ಫಿಗೆ ಪೋಸ್ ನೀಡಿದ್ದಾರೆ.