ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ಯಶ್ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಮತದಾನದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದಾರೆ. ಕಳೆದ ಬಾರಿ ಪ್ರಚಾರಕ್ಕೆ ಹೋಗಲು ಕೆರೆ ತುಂಬಿಸುವುದೂ ಸೇರಿದಂತೆ ಕೆಲ ವೈಯಕ್ತಿಕ ಉದ್ದೇಶಗಳಿದ್ದವು. ಈ ಬಾರಿ ಪ್ರಚಾರ ಮಾಡಲು ನನಗೆ ಆಸಕ್ತಿ ಇರಲಿಲ್ಲ ಎಂದು ಹೇಳಿದ್ದಾರೆ.
ಮತ ಹಾಕುವ ಬಗ್ಗೆ ತಿಳುವಳಿಕೆ ನೀಡಲೂ ಶಿಕ್ಷಣ ಅಗತ್ಯ ಎನಿಸುತ್ತದೆ. ಪ್ರಾಥಮಿಕ ಹಂತದ ಕೆಲಸಗಳನ್ನು ಜನಪ್ರತಿನಿಧಿಗಳು ಮಾಡಿದರೆ ಉಳಿದಿದ್ದನ್ನು ಜನರೇ ಮಾಡುತ್ತಾರೆ ಎಂಬುದು ನನ್ನ ಭಾವನೆ ಅಂತಾ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಮತದಾನದ ಮಾಡಿದ ನಟಿ ಅಮೂಲ್ಯ-ಜಗದೀಶ್
ಜೆ.ಪಿ ನಗರದಲ್ಲಿ ಕಿಚ್ಚ ಮತದಾನ
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಆಕ್ಸ್ ಫರ್ಡ್ ಶಾಲೆಯಲ್ಲಿ ಕುಟುಂಬದ ಜತೆ ಆಗಮಿಸಿ ಮತದಾನ ಮಾಡಿದ್ದಾರೆ.
ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿಯೊಬ್ಬ ಮತದಾರರಿಗೂ ತಾವು ಅನುಭವಿಸುವ ಸಮಸ್ಯೆಗಳು ವೈಯಕ್ತಿಕವಾಗಿರಲಿದ್ದು, ಮತದಾರರರು ಮತ ಚಲಾಯಿಸುವಾಗ ಸಮಸ್ಯೆಗಳನ್ನು ತಮ್ಮ ಮನದಲ್ಲಿ ಇಟ್ಟುಕೊಂಡಿರಬೇಕು. ನಾನು ಇಲ್ಲಿಗೆ ಓರ್ವ ನಟ ಎಂದುಕೊಂಡು ಬಂದಿಲ್ಲ. ನಾನೊಬ್ಬ ಭಾರತೀಯ ಎಂದು ಭಾವಿಸಿಯೇ ನನ್ನ ಜವಾಬ್ದಾರಿಯನ್ನು ಪೂರೈಸಲು ಬಂದಿದ್ದೇನೆ ಎಂದು ಎಂದಿದ್ದಾರೆ.
ಪತ್ನಿ Priya Radhakrishnan ಹಾಗೂ ಮಗಳು #SanviSudeep ಜೊತೆ ಆಗಮಿಸಿ ತಮ್ಮ ಮತ ಚಲಾಯಿಸಿದ ನಮ್ಮ @KicchaSudeep ☑️🙌#KarnatakaAssemblyElection2023#KarnatakaElections #KicchaSudeep #Sudeep #KicchaBOSS𓃵#heartbeatSudeepfan pic.twitter.com/jHkQ6Fw6ld
— 𝙃𝙀𝘼𝙍𝙏 𝘽𝙀𝘼𝙏 𝙎𝙐𝘿𝙀𝙀𝙋 𝙁𝘼𝙉 ♥️😍🥰😇🩺 (@VirajKarkinaik) May 10, 2023