ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಬುರ್ಗಿಯಲ್ಲಿ ಇಂದು ಮತ ಚಲಾಯಿಸಿದ್ದಾರೆ.
ಕಲಬುರಗಿ ನಗರದ ಬಸವ ನಗರದ ಸಮುದಾಯ ಆರೋಗ್ಯ ಕೇಂದ್ರದ ಬೂತ್ ನಂಬರ್ 120ರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪತ್ನಿ ರಾಧಾಬಾಯಿ ಮತ ಚಲಾಯಿಸಿದ್ದಾರೆ.
ನಮಗೆ ಬಹುಮತ ಗ್ಯಾರೆಂಟಿ
ಮತದಾನದ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಕಳೆದ 55 ವರ್ಷಗಳಿಂದಲೂ ಇದೇ ಮತಗಟ್ಟೆಯಲ್ಲೇ ಮತ ಚಲಾಯಿಸುತ್ತಿದ್ದೇನೆ. ಮತದಾರರ ಉತ್ಸಾಹ ನೋಡಿದರೆ ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವ ವಿಶ್ವಾಸ ವಿದೆ. ನಾವು ಈ ಬಾರಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಶ್ರೀ @kharge ಅವರು ಕಲ್ಬುರ್ಗಿಯಲ್ಲಿ ಮತ ಚಲಾಯಿಸಿದರು.#CongressWinning150 pic.twitter.com/ZVNomBCPnO
— Karnataka Congress (@INCKarnataka) May 10, 2023
ಇದನ್ನೂ ಓದಿ : ಮತದಾನ ಕುರಿತು ಪ್ರಧಾನಿ ಟ್ವೀಟ್
ಇನ್ನೂ ಮತದಾನ ಮಾಡುವ ಸಮಯದಲ್ಲಿ ಪತ್ನಿ ರಾಧಾಬಾಯಿ ಅವರು ಮಲ್ಲಿಕಾರ್ಜುನ ಖರ್ಗೆಗೆ ಸಾಥ್ ನಿಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಹತ್ತಿರಕ್ಕೆ ಬಂದ ಪತ್ನಿಯನ್ನು ಸ್ವಲ್ಪ ದೂರ ಹೋಗುವಂತೆ ಸೂಚಿಸಿದ್ದಾರೆ.
ಪ್ರತಿ ಮತವೂ ಗಣನೆಗೆ ಬರುತ್ತದೆ.
ಪ್ರತಿಯೊಂದು ಮತವೂ ಬದಲಾವಣೆಗೆ ನಾಂದಿ ಹಾಡುತ್ತದೆ.
ಪ್ರತಿಯೊಂದು ಮತವೂ ನಿಮ್ಮನ್ನು ಸಾಮಾಜಿಕ ನ್ಯಾಯ ಮತ್ತು ಪ್ರಗತಿಯತ್ತ ಕೊಂಡೊಯ್ಯುತ್ತದೆಸಂವಿಧಾನ ರಕ್ಷಣೆ ಮತ್ತು ಕರ್ನಾಟಕದ ಪ್ರಗತಿಗಾಗಿ ಮತ ಹಾಕಿದ್ದೇವೆ. pic.twitter.com/a3QwdrYM5O
— Mallikarjun Kharge (@kharge) May 10, 2023
ಮತದಾನ ಗೌಪ್ಯತೆ ಹಿನ್ನೆಲೆಯಲ್ಲಿ ಪತ್ನಿಗೆ ದೂರ ನಿಲ್ಲುವಂತೆ ಖರ್ಗೆ ಸೂಚನೆ ಕೊಟ್ಟಿದ್ದಾರೆ. ಬಳಿಕ, ಪತ್ನಿ ರಾಧಾಬಾಯಿ ಮತ ಚಲಾಯಿಸುವಾಗ ಖರ್ಗೆ ಅವರು ಸಹ ದೂರ ನಿಂತು, ಮಾದರಿ ನಡೆ ಪ್ರದರ್ಶಿಸಿದ್ದಾರೆ.