Monday, December 23, 2024

ಉಚಿತ ದೋಸೆ, ಸಿನಿಮಾ ಟಿಕೆಟ್ ಬೇಕೇ? ಹಾಗಿದ್ರೆ ವೋಟ್ ಮಾಡಿ ತಪ್ಪದೇ ಇಲ್ಲಿಗೆ ಬನ್ನಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ, ಬೆಂಗಳೂರಿನಲ್ಲೊಂದು ಹೋಟೆಲ್​ ಮತದಾನ ಜಾಗೃತಿ ಹಾಗೂ ಪ್ರೋತ್ಸಾಹಕ್ಕೆ ಮುಂದಾಗಿದೆ. ಎಲ್ಲರ ಗಮನ ಸೆಳೆದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪ್ರತಿಷ್ಟಿತ ನಿಸರ್ಗ ಗ್ರ್ಯಾಂಡ್​ ಹೋಟೆಲ್​​ ಈ ಕೆಲಸಕ್ಕೆ ಮುಂದಾಗಿದೆ. ಮತದಾನ ಮಾಡಿ ಶಾಹಿ ಗುರುತು ತೋರಿಸಿ ಫ್ರೀ ದೋಸೆ ತಿನ್ನಿ ಎಂದು ಮತದಾರರಿಗೆ ಬಂಪರ್ ಆಫರ್​ ನೀಡಿದೆ.

ಮೇ10 ರಂದು ಮತದಾನ ಮಾಡಿಬಂದವರಿಗೆ ಬಂಪರ್ ಆಫರ್ ನೀಡಲಾಗಿದೆ. ಹೋಟೆಲ್​ನಲ್ಲಿ ಬಿಸಿ‌ಬಿಸಿ ಬೆಣ್ಣೆ ದೋಸೆ, ರುಚಿಯಾದ ಮೈಸೂರು ಪಾಕನ್ನು ಮತದಾನ ಮಾಡಿ ಬಂದಂತವರಿಗೆ ಕೊಡಲಾಗುತ್ತದೆ.

ಇದನ್ನೂ ಓದಿ : ನಿಮ್ಮ ‘ಕೈ’ ಬೆರಳಿಗೆ ಹಚ್ಚುವ ಶಾಯಿ ತಯಾರಾಗುವುದು ಎಲ್ಲಿ? : ಇಲ್ಲಿದೆ ಮಾಹಿತಿ

ಇದರ ಹೊರತಾಗಿ ಮೊದಲು ಮತದಾನ ಮಾಡಿದ 100 ಜನರಿಗೆ ಉಚಿತವಾಗಿ ಸಿನಿಮಾ ಟಿಕೆಟ್ ಸಹ ಹೋಟೆಲ್​​ ಮಾಲೀಕರು ನೀಡುತ್ತಿದ್ದಾರೆ. ಈ ಮೂಲಕ ಮತದಾನದ ಶೇಕಾಡವಾರು ಹೆಚ್ಚಳ ಮಾಡುವ ಉದ್ದೇಶಕ್ಕೆ ನಿಸರ್ಗ ಗ್ರ್ಯಾಂಡ್​ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

ಇನ್ನೂ ಚರ್ಚ್ ಸ್ಟ್ರೀಟ್‌ನಲ್ಲಿರುವ ಚಾಲುಕ್ಯ ಸಾಮ್ರಾಟ್ ಕೆಫೆಯು ಮತದಾರರಿಗೆ ಬೆಳಗ್ಗೆ 7.30 ರಿಂದ 11.30 ರವರೆಗೆ ಉಚಿತ ಉಪಹಾರವನ್ನು ನೀಡಲು ನಿರ್ಧರಿಸಿದೆ. ಮತದಾರರು ವೋಟಿಂಗ್ ಬಳಿಕ ಕೈ ಬೆರಳಿಗೆ ಹಾಕಿರುವ ಶಾಯಿ ತೋರಿಸಿ ಈ ಆಫರ್ ಪಡೆಯಬಹುದು.

2019ರಲ್ಲೂ ಉಚಿತ ಉಪಹಾರ

ಕಳೆದ ಬಾರಿಯ 2019ರ ಲೋಕಸಭಾ ಚುನಾವಣೆ ವೇಳೆಯೂ ಪ್ರತಿಷ್ಟಿತ ನಿಸರ್ಗ ಗ್ರ್ಯಾಂಡ್​ ಹೋಟೆಲ್ ಮತದಾರರಿಗೆ ಉಚಿತ ಉಪಹಾರ ನೀಡುವುದಾಗಿ ಹೇಳಿತ್ತು. ಮತದಾನ ಮಾಡಿ ಬಂದವರಿಗೆ ಹೋಟೆಲ್ ನಲ್ಲಿ ಬೆಣ್ಣೆದೋಸೆ, ಸಿಹಿ ತಿಂಡಿ, ತಂಪು ಪಾನಕವನ್ನು ನೀಡಿತ್ತು. ಇದು ಸಾಮಾಜಿಕ ಕಳಕಳಿ ಉಳ್ಳ ರಾಜಕೀಯೇತರ ಕಾರ್ಯಕ್ರಮ ಎಂದು ಹೇಳಿತ್ತು. ಮತದಾನ ಮಾಡಿ ಬಂದವರು ತಮ್ಮ ಕೈ ಬೆರಳಿಗೆ ಹಾಕಿದ್ದ ಶಾಹಿ ಗುರುತು ತೋರಿಸಿ ಉಚಿತವಾಗಿ ಉಪಹಾರ ಸೇವಿಸಿದ್ದರು.

ಉಚಿತ ಊಟಕ್ಕೆಹೈಗ್ರೀನ್ ಸಿಗ್ನಲ್

ಮತದಾನ ಮಾಡುವವರಿಗೆ ಉಚಿತ ಊಟದ ಆಫರ್ ವಿಚಾರ ಬಿಬಿಎಂಪಿ ತಡೆಯೊಡ್ಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಮತದಾನ ಬಳಿಕ ಉಚಿತ ಊಟ ನೀಡಲು ಅನುಮತಿ ನೀಡಿದೆ. ಈ ಸಂಬಂಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳು ಉಚಿತ ಊಟಕ್ಕೆ ಅವಕಾಶ ನೀಡಿದ್ದಾರೆ.

RELATED ARTICLES

Related Articles

TRENDING ARTICLES