ಬೆಂಗಳೂರು : ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಮತದಾರರು ತಪ್ಪದೇ ಮತದಾನ ಮಾಡಲು, ಮತದಾನ ಜಾಗೃತಿ ಅಭಿಯಾನವನ್ನು ಯಲಹಂಕ ವಿಭಾಗದ ಮದರ್ ಡೇರಿ ವೃತ್ತದ ದಿಂದ, ವಿಷ್ಣು ಪಾರ್ಕ್ ವೃತ್ತದವರೆಗೆ ಹಮ್ಮಿಕೊಂಡಿದ್ದು, ಅಭಿಯಾನಕ್ಕೆ ಯಲಹಂಕ ವಲಯದ ಜಂಟಿ ಆಯುಕ್ತೆ ಪೂರ್ಣಿಮಾ ಚಾಲನೆ ನೀಡಿದರು.
ಈ ವೇಳೆ ಯಲಹಂಕ ವಲಯದ ಉಪ ಆಯುಕ್ತ ಡಾ. ಮಮತಾ, ಪೊಲೀಸ್ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಪಾಲಿಕೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು, ಲಿಂಕ್ ವರ್ಕರ್ಸ್ ಗಳು, ಸಿ.ಆರ್.ಪಿ ಗಳು ಭಾಗವಹಿಸಿದ್ದರು.
ಇದನ್ನೂ ಓದಿ : ಬಹಿರಂಗ ಪ್ರಚಾರಕ್ಕೆ ತೆರೆ, ಮನೆ-ಮನೆ ಪ್ರಚಾರಕ್ಕೆ ಮಾತ್ರ ಅವಕಾಶ
ಈ ಸಂದರ್ಭದಲ್ಲಿ ಜ್ಞಾನ ಜ್ಯೋತಿ ಕಾಲೇಜ್ ವಿದ್ಯಾರ್ಥಿಗಳು ಮತ್ತು ಯುವ ಮತದಾರರಿಗೆ ಮತದಾನ ಬಗ್ಗೆ ಅರಿವು ಮೂಡಿಸಲಾಯಿತು ಜೊತೆಗೆ ಎಲ್ಲರೂ ತಪ್ಪದೇ ಮತದಾನ ಮಾಡಲು ಮತದಾನ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ನಾಳೆ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ನಾಳೆ ಬೆಳಗ್ಗೆ 9.15ಕ್ಕೆ ಯಲಹಂಕದ ಶೇಷಾದ್ರಿಪುರಂ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.