Monday, December 23, 2024

‘ಭ್ರಷ್ಟಾಚಾರ ಮುಕ್ತ ರಾಜ್ಯ’ಕ್ಕಾಗಿ ಉಮಾಪತಿಯವರನ್ನು ಗೆಲ್ಲಿಸಿ : ಪ್ರಿಯಾಂಕಾ ಗಾಂಧಿ

ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ನ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ ಎಲ್ಲೆಡೆ ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದು, ಇಂದು ಬೊಮ್ಮನಹಳ್ಳಿ ಬೇಗೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಚಾರವನ್ನು ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹೋದಲೆಲ್ಲಾ ಸಂಭ್ರಮ ಸಡಗರದಿಂದ ಉಮಾಪತಿಯವರನ್ನು ಸ್ವಾಗತಿಸುತಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಡಿ.ಕೆ ಶಿವಕುಮಾರ್ ಅವರು ಉಮಾಪತಿ ಶ್ರೀನಿವಾಸ ಗೌಡ ಅವರ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಉಮಾಪತಿ ಶ್ರೀನಿವಾಸಗೌಡ ಮತ ನೀಡಿ ಕಾಂಗ್ರೆಸ್ ನನ್ನು ಬೆಂಬಲಿಸುವಂತೆ ಮತದಾರರನ್ನು ಮನವಿ ಮಾಡಿದ್ದಾರೆ.

ಈ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮಾತನಾಡಿ, ಭ್ರಷ್ಟಾಚಾರ ಮುಕ್ತ ರಾಜ್ಯವನ್ನು ಮಾಡಲು ಉಮಾಪತಿಯವರನ್ನು ಬೆಂಬಲಿಸಿ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಕರ್ನಾಟಕದಲ್ಲಿ ಹೊಸ ಬದಲಾವಣೆ ಆರಂಭವಾಗಲು ದಿನಗಣನೆ ಅರಭವಾಗಿದ್ದು, ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಇದನ್ನೂ ಓದಿ : ದುಡ್ಡಿಂದ ಯಾರನ್ನು ಕೊಂಡುಕೊಳ್ಳೊಕೆ ಆಗಲ್ಲ : ಉಮಾಪತಿ ಶ್ರೀನಿವಾಸ್ ಗೌಡ

ಐಟಿ ಕ್ಷೇತ್ರಕ್ಕೆ 225 ಕೋಟಿ ನಷ್ಟ

ಕರ್ನಾಟಕದ ಐಟಿ ಕ್ಷೇತ್ರಕ್ಕೆ 225 ಕೋಟಿ ನಷ್ಟವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ನಂಬರ್-1 ಆಗಿತ್ತು, ಇದನ್ನು ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದು ಕರೆಯಲಾಗುತ್ತಿತ್ತು.ಇಂದು ಬಂಡವಾಳ ಹೂಡಿಕೆ ಅಗುತ್ತಿಲ್ಲ, ಸ್ಟಾರ್ಟ್ ಅಪ್ ಬಂಡವಾಳದ ಸ್ಥಾನಮಾನ ಕಿತ್ತುಕೊಳ್ಳಲಾಗಿದೆ ಮತ್ತು ಉದ್ಯೋಗಗಳು ನಾಶವಾಗುತ್ತಿವೆ ಎಂದು ಹೇಳಿದ್ದಾರೆ.

ಜನ ಬದಲಾವಣೆ ಬಯಸಿದ್ದಾರೆ

ಇನ್ನು ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬ ಮಾತು ಸಹ ಉಮಾಪತಿಯವರು ಹೇಳಿದ್ದು ಮುಂದಿನ ದಿನಗಳಲ್ಲಿ ತಮಗೆ ಬೆಂಬಲಿಸಿದರೆ ಖಂಡಿತವಾಗಲೂ ಯಾವುದೇ ಭ್ರಷ್ಟಾಚಾರವಿಲ್ಲದೆ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಜನಸಾಮಾನ್ಯರಿಗೆ ಬರವಸೆಯನ್ನು ನೀಡಿ ಮತವನ್ನು ಯಾಚಿಸುತ್ತಿದ್ದಾರೆ.

15 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಇಲ್ಲ ಎಂದು ಉಮಾಪತಿಯವರು ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಬಿಜೆಪಿಯ ಭದ್ರಕೋಟೆಯನ್ನು ಉಮಾಪತಿ ಭೇದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES