Sunday, January 19, 2025

ಗುಡ್ ನ್ಯೂಸ್ : ಮೇ 10ರಂದು ರಾಜ್ಯಾದ್ಯಂತ ವಿಶೇಷ ರೈಲು, ಬೆಳಗಾವಿಗೆ ಬಂಪರ್

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರಾಜ್ಯಕ್ಕೆ ಗುಡ್ ನ್ಯೂಸ್ ನೀಡಿದೆ.

ಮೇ 10 ಪ್ರಜಾಪ್ರಭುತ್ವದ ಅತ್ಯಂತ ಮಹತ್ತರವಾದ ಉತ್ಸವ, ಈ ಮತದಾನಕ್ಕೊಸ್ಕರವಾಗಿ ರೈಲ್ವೆ ಇಲಾಖೆಯು ರಾಜ್ಯಾದ್ಯಂತ ವಿಶೇಷ ರೈಲುಗಳನ್ನು ಹಾಗೂ ಪ್ರತಿ ನಿತ್ಯದ ರೈಲುಗಳಿಗೆ ಹೆಚ್ಚಿನ ಬೋಗಿಗಳ ಜೋಡಣೆ ಮಾಡಿದೆ.

ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನ ಯಶವಂತಪುರದಿಂದ (ರಾತ್ರಿ 8.30ಕ್ಕೆ) ಬೆಳಗಾವಿ ವರೆಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಈ ಭಾಗದ ಎಲ್ಲ ಮತದಾರರು ಇದರ ಪ್ರಯೋಜನ ಪಡೆದು ತಮ್ಮ-ತಮ್ಮ ಮತಕ್ಷೇತ್ರದಲ್ಲಿ ಮತಚಲಾಯಿಸಿ ಈ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ. ಮತದಾನದ ದಿನ ಮರಳಿ ಇದೇ ರೈಲು ಬೆಂಗಳೂರಿಗೆ ಸಂಚರಿಸಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮಧ್ಯರಾತ್ರಿಯವರೆಗೆ ಮೆಟ್ರೋ ರೈಲು ಸಂಚಾರ

ಇನ್ನೂ, ಮೆಟ್ರೋ ರೈಲು ಸಂಚಾರದ ಅವಧಿಯನ್ನ ವಿಸ್ತರಣೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸೇವೆಗಳನ್ನು ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ. ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.

ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ)ಯಿಂದ ಕೊನೆಯ ರೈಲು ಮೇ 11ರ ರಾತ್ರಿ 12 ಗಂಟೆ 5 ನಿಮಿಷಕ್ಕೆ ಹೊರಡಲಿದೆ. ಇನ್ನು ನಾಡಪುಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಮೇ 11ರ ರಾತ್ರಿ 12 ಗಂಟೆ 35 ನಿಮಿಷಕ್ಕೆ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆಯಿಂದ ಹೊರಡಲಿದೆ.

RELATED ARTICLES

Related Articles

TRENDING ARTICLES