Monday, December 23, 2024

ಬಾರದ ಲೋಕಕ್ಕೆ ‘ಬಲರಾಮ’, ಭೀಮನಕಟ್ಟೆಯಲ್ಲೇ ಅಂತ್ಯಸಂಸ್ಕಾರ

ಬೆಂಗಳೂರು : ತನ್ನ ಜೀವಿತಾವಧಿಯಲ್ಲಿ 14 ಬಾರಿ ದಸರಾ ಅಂಬಾರಿಯನ್ನು ಹೊತ್ತ ಹೆಗ್ಗಳಿಕೆ ಪಡೆದಿದ್ದ ಬಲರಾಮನ ಅಂತ್ಯಸಂಸ್ಕಾರ ಇಂದು ನೆರವೇರಿಸಲಾಗಿದೆ.

ಹೌದು, ದಸರಾ ಆನೆ ಬಲರಾಮ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಸರ್ಕಾರಿ ಗೌರವಗಳೊಂದಿಗೆ ಇಂದು ಭೀಮನಕಟ್ಟೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಬಾಯಲ್ಲಿ ಹುಣ್ಣಾಗಿ ಆಹಾರ, ನೀರು ಸೇವಿಸಲಾಗದೇ ಅಸ್ವಸ್ಥಗೊಂಡಿದ್ದ ಬಲರಾಮ ನಿನ್ನೆ ಇಹಲೋಕ ತ್ಯಜಿಸಿದ್ದನು. ಬಲರಾಮ ಆನೆ ತನ್ನ ಸೌಮ್ಯ ಸ್ವಭಾವದಿಂದಲೇ ಎಲ್ಲರ ಮನ ಗೆದ್ದಿತ್ತು. ಇದೀಗ, ಬಲರಾಮ ನೆನಪು ಮಾತ್ರವಾಗಿದ್ದಾನೆ.

ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಬಲರಾಮ ಆನೆ ಸಾವನ್ನಪ್ಪಿತ್ತು. ಒಂದು ಕಣ್ಣು ಕಾಣದಿದ್ದರೂ ದಸರಾದಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದನು. ಬಲರಾಮ ಆನೆ ಗಜಪಡೆ ಪೈಕಿ ಅತ್ಯಂತ ಸೌಮ್ಯ ಸ್ವಭಾವದ ಆನೆ ಎಂದೇ ಖ್ಯಾತಿ ಪಡೆದಿತ್ತು.

ಇದನ್ನೂ ಓದಿ : ಗುಡ್ ನ್ಯೂಸ್ : ಮೇ 10ರಂದು ರಾಜ್ಯಾದ್ಯಂತ ವಿಶೇಷ ರೈಲು, ಬೆಳಗಾವಿಗೆ ಬಂಪರ್

ಪ್ರಧಾನಿ ಮೊದಿ ಸಂತಾಪ

ತನ್ನ ಜೀವಿತಾವಧಿಯಲ್ಲಿ 14 ಬಾರಿ ದಸರಾ ಅಂಬಾರಿಯನ್ನು ಹೊತ್ತಿದ್ದ ಹೆಗ್ಗಳಿಕೆ ಹೊಂದಿರುವ ಬಲರಾಮ ಆನೆಯ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮೋದಿ, ಸಂತಾಪ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿ ಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES