Monday, December 23, 2024

ಸುಧಾಕರ್ ‘ಚಿಕ್ಕಬಳ್ಳಾಪುರ ಕ್ಷೇತ್ರವನ್ನು ದೊಡ್ಡಬಳ್ಳಾಪುರ ‘ಮಾಡಿದ್ದಾರೆ : ನಟ ಸುದೀಪ್

ಚಿಕ್ಕಬಳ್ಳಾಪುರ : ಮಾತುಗಾರನಿಗೆ ಮಣೆ ಹಾಕದೆ, ಕೆಲಸಗಾರಿನಿಗೆ ಮತ ನೀಡಿ ಎಂದು ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಹೇಳಿದರು.

ಮಂಚೇನಹಳ್ಳಿಯಲ್ಲಿ ನಟ ಸುದೀಪ್ ಅವರೊಂದಿಗೆ ನಡೆದ ರೋಡ್ ಶೋನಲ್ಲಿ ಬಾಗವಹಿಸಿ ಅವರು ಮಾತನಾಡಿದರು.

ತಮಗೆ ಬೆಂಬಲ ವ್ಯಕ್ತಪಡಿಸಿ, ತಮ್ಮ ಪರ ಪ್ರಚಾರ ನಡೆಸಲು ಚಿಕ್ಕಬಳ್ಳಾಪುರಕ್ಕೆ ಆಗಮಿಸಿರುವ ಸುದೀಪ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು, ಈ ಚುನಾವಣೆಯಲ್ಲಿ ಅಭಿವೃದ್ಧಿಯೇ ಮಾನದಂಡವಾಗಲಿ. ಇಲ್ಲಿಯವರೆಗೂ ತಂದಿರುವ ಅಭಿವೃದ್ಧಿಯ ರಥವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರೂ ಮತ್ತೊಮ್ಮೆ ಬಿಜೆಪಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ, ಮಾತುಗಳಿಂದ ಕೆರೆಗಳು ತುಂಬುವುದಿಲ್ಲ, ಹಾಗಾಗಿ ಮಾತುಗಾರನಿಗೆ ಮಣೆ ಹಾಕದೆ, ಕೆಲಸಗಾರಿನಿಗೆ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ರಥವನ್ನು ಮುಂದಕ್ಕೆ ಕೊಂಡೊಯ್ಯಲು ಸಹಕರಿಸಬೇಕೆಂದು ಡಾ.ಕೆ ಸುಧಾಕರ್ ಕೋರಿದರು.

ಇದನ್ನೂ ಓದಿ : ಪ್ರಧಾನಿ ಮೋದಿ ವಿಶ್ವಗುರು, ಅದಕ್ಕೆ ‘ಕಾಂಗ್ರೆಸ್ ಗೆ ಭಯ’ : ಸಚಿವ ಡಾ.ಕೆ ಸುಧಾಕರ್

ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಮಾಡಿದ್ದಾರೆ

ನಟ ಕಿಚ್ಚ ಸುದೀಪ್ ಅವರು ಮಾತನಾಡಿ, ಸಧಾಕರ್ ತಮ್ಮ ಆಪ್ತರಾಗಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ದೊಡ್ಡಬಳ್ಳಾಪುರ ಮಾಡಿರುವ ಡಾ.ಕೆ. ಸುಧಾಕರ್ ಅವರಿಗೆ ಮತ್ತೊಮ್ಮೆ ಮತ ನೀಡುವ ಮೂಲಕ ಕ್ಷೇತ್ರದ ಅಬಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಟಿ ಮುಂದೆ ಬಂದರೆ ಈ ಹಿಂದೆ ಹಳ್ಳಿಗೆ ಹೋಗುವಂತೆ ಭಾಸವಾಗುತ್ತಿತ್ತು, ಆದರೆ ಈಗ ಚಿಕ್ಕಬಳ್ಳಾಪುರವನ್ನು ನಗರವಾಗಿ ಪಪರಿವರ್ತಿಸಲು ಅವರು ಶ್ರಮಿಸುತ್ತಿದ್ದಾರೆ, ಈ ಬಾರಿಯೂ ನಿಮ್ಮ ಬೆಂಬಲ ಅವರಿಗೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ, ಈ ಜನ ಸುಧಾಕರ್ ಅವರ ಕೈ ಹಿಡಿಯುವವರೇ ಹೊರತು ಕೈ ಕೊಡುವವರಲ್ಲ ಎಂದು ಭರವಸೆ ನೀಡಿದರು.

ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ

ತೆಲುಗು ಹಾಸ್ಯ ನಟ ಬ್ರಹ್ಮಾನಂದಮ್ ಮಾತನಾಡಿ, ಗೆಳೆಯ ಸುಧಾಕರ್ ಅವರನ್ನು ಕಳೆದ ಬಾರಿಗಿಂತ ದುಪ್ಪಟ್ಟು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾತನಾಡಿದ ಅವರು, ಜನ ನಾಯಕ ಸುಧಾಕರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಕೊನೆಯಲ್ಲಿ ಡೈಲಾಗ್ ಮೂಲಕ ನೆರೆದಿದ್ದ ಜನರನು ಬ್ರಹ್ಮಾನಂದಮ್ ರಂಜಿಸಿದರು.

RELATED ARTICLES

Related Articles

TRENDING ARTICLES