Thursday, December 19, 2024

ಸಮೃದ್ಧಿ ಮಂಜುನಾಥ್ ಗೆಲ್ಲಿಸಲು ಪಣತೊಟ್ಟ ದಳಪತಿಗಳು

ಬೆಂಗಳೂರು : ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಚಾರ ಜೋರಾಗಿದೆ. ಹಳ್ಳಿಗಳಲ್ಲಿ ಸಮೃದ್ದಿ ಮಂಜುನಾಥ ಅವರಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ.

ಇಂದು ತಮ್ಮ ಮುಳಬಾಗಿಲು ಮತಕ್ಷೇತ್ರದ ಹಲವು ಹಳ್ಳಿಗಳಲ್ಲಿ ಅಭ್ಯರ್ಥಿ ಸಮೃದ್ದಿ ಮಂಜುನಾಥ್​ ಮತಯಾಚನೆ ನಡೆಸಿದರು. ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಸಮೃದ್ದಿ ಮಂಜುನಾಥ್​ ಗೆಲುವಿಗೆ ಒಗ್ಗಟ್ಟಿನಿಂದ ಹೋರಾಡುವುದಾಗಿ ಮುಖಂಡರೆಲ್ಲಾ ಪಣ ತೊಟ್ಟಿದ್ದಾರೆ.

ನಂತರ ನಂಗಲಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ನಂಗಲಿ ಗ್ರಾಮದಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಸಮೃದ್ದಿ ಮಂಜುನಾಥ್​ ಮಾತನಾಡಿದರು.

ಇದನ್ನೂ ಓದಿ : 15 ವರ್ಷದಿಂದ ‘ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡ್ತಿದೆ’ : ಸಮೃದ್ಧಿ ಮಂಜುನಾಥ್

ಇಡೀ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವ ಅಗತ್ಯವಿದೆ. ಕ್ಷೇತ್ರದ ಜನರ ಬಡತನವನ್ನು ದೂರ ಮಾಡುವ ಹೊಣೆಯೂ ನನ್ನದಾಗಿದ್ದು, ಈಗಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಏಕಾಂಗಿ

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಈ ಸಲದ ಕಾಂಗ್ರೆಸ್ ಅಭ್ಯರ್ಥಿ ಏಕಾಂಗಿಯಾಗಿದ್ದಾರೆ. ಜೊತೆಗಿದ್ದು ಗೆಲ್ಲಿಸುವುದಾಗಿ ಭರವಸೆ ಕೊಟ್ಟವರು ನಾಪತ್ತೆಯಾಗಿದ್ದಾರೆ ಅಂತ ಲೇವಡಿ ಮಾಡಿದರು.

ಒಟ್ನಲ್ಲಿ, ಮುಳಬಾಗಲು ಕ್ಷೇತ್ರದ ಜೆಡಿಎಸ್ ಮುಖಂಡರು ಅಭ್ಯರ್ಥಿ ಸಮೃದ್ದಿ ಮಂಜುನಾಥ ಅವರ ಗೆಲುವಿಗಾಗಿ ದುಡಿಯುತ್ತಿದ್ದಾರೆ. ಪಕ್ಷದಿಂದ ದೂರವಾಗಿರುವ ಹಲವಾರು ಮಂದಿ ಕಡೆ ಘಳಿಗೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿರುವ ಬೆಳವಣಿಗೆ ನಡೆಯುತ್ತಿರುವುದು ಮಂಜುನಾಥ್ ಅವರ ಗೆಲುವಿಗೆ ಸಿಕ್ಕಿರುವ ಮುನ್ಸೂಚನೆ.

RELATED ARTICLES

Related Articles

TRENDING ARTICLES