Monday, December 23, 2024

ಜನರ ಹಣ ಲೂಟಿ ತಡೆಗಟ್ಟಿ ಪಂಚರತ್ನ ಯೋಜನೆ ಜಾರಿ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಜನರ ಹಣ ಲೂಟಿ ತಡೆಗಟ್ಟಿ ಪಂಚರತ್ನ ಯೋಜನೆ ಜಾರಿಗೆ ಹಣ ಹೊಂದಿಸುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ವಸಂತಪುರದಲ್ಲಿ ಶನಿವಾರ ಸಂಜೆ ಜೆಡಿಎಸ್ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡಿದ ವೇಳೆ ಅವರು ಮಾತನಾಡಿದರು.

ಈ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಕೆಲವರು ಕೊಂಕು ಮಾತನಾಡುತ್ತಿದ್ದಾರೆ. ಹೊಸ ತೆರಿಗೆ ಹಾಕದೆ, ಸಾಲ ಮಾಡದೆ ಆಂತರಿಕ ಸಂಪನ್ಮೂಲ ಕ್ರೋಡೀಕರಿಸುತ್ತೇವೆ. ಜನರ ಮೇಲೆ ಯಾವುದೇ ತೆರಿಗೆಭಾರ ಹಾಕದೇ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದು ತಿಳಿಸಿದರು.

ಪಂಚರತ್ನ ಯೋಜನೆಗಳು ಉಚಿತ ಕೊಡುಗೆಗಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವು ಉಚಿತ ಕೊಡುಗೆಗಳಲ್ಲ. ರೈತರು ಸೇರಿ ಎಲ್ಲ ವರ್ಗದ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಹಾಗೂ ಸರಕಾರಕ್ಕೆ ಆಸ್ತಿಗಳನ್ನು ಸೃಷ್ಟಿ ಮಾಡುವ ಯೋಜನೆಗಳಾಗಿವೆ ಎಂದರು.

ಇದನ್ನೂ ಓದಿ : ಜೆಡಿಎಸ್ ಶಾಲು ಹಾಕ್ಕೊಂಡು ‘ಕೈ’ ಪರ ಪ್ರಚಾರ ಮಾಡು ಅಂದ್ರು : ರಘು ಆಚಾರ್ ಹೊಸ ಬಾಂಬ್

ಶಿಕ್ಷಣ ವ್ಯವಸ್ಥೆಗೆ ಚಿಕಿತ್ಸೆ ನಿಡುತ್ತೇನೆ

ಇಂದು ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳ ಭವಿಷ್ಯಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲ ಮಾಡುತ್ತಿದ್ದಾರೆ. ಜನರ ಸಹಕಾರದಿಂದ ಜನತಾ ಸರಕಾರ ಬಂದರೆ ಶಿಕ್ಷಣ ವ್ಯವಸ್ಥೆಗೆ ಚಿಕಿತ್ಸೆ ನೀಡುತ್ತೇನೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು.

ಅಧಿಕಾರ ಬಿಟ್ಟರೆ ಬೇರೆ ಬೇಕಿಲ್ಲ

ಈ ಚುನಾವಣೆ ಮಹತ್ವ ಪೂರ್ವವಾಗಿದೆ. ಮತ ಕೇಳಲು ಎರಡು ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ಮುಖಂಡರು ಬಂದಿದ್ದಾರೆ. ಪ್ರಧಾನಮಂತ್ರಿ ಸೇರಿ ಎಲ್ಲರೂ ಬಂದಿದ್ದಾರೆ. ಪರಸ್ಪರ ಕೆಸರು ಎರಚಿಕೊಂಡು ಭಾವನಾತ್ಮಕ ವಿಚಾರಗಳ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಜನರ ಕಷ್ಟಗಳ ಬಗ್ಗೆ, ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಅವರು ಚರ್ಚೆ ಮಾಡುತ್ತಿಲ್ಲ. ಅಧಿಕಾರ ಬಿಟ್ಟರೆ ಅವರಿಗೆ ಬೇರೆ ಬೇಕಿಲ್ಲ ಎಂದು ಕಿಡಿಕಾರಿದರು.

ಈ ಬಾರಿ ಕನ್ನಡಿಗರು ಪಂಚರತ್ನ ಯೋಜನೆಗಳ ಜಾರಿಗೆ ಜನಾದೇಶ ನೀಡಬೇಕು. ಇದೇ ಮೇ 10ರಂದು ನಡೆಯುವ  ಚುನಾವಣೆಯಲ್ಲಿ ಪ್ರಾದೇಶಿಕ ಪ್ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.

ನಟನಟಿಯರಿಗೆ ಸುಧಾಕರ್ ಅಭಿನಂದನೆ

ಚುನಾವಣೆಯ ಒತ್ತಡದ ಕಾರಣ ಕ್ಷೇತ್ರದ ಪ್ರತಿ ಹಳ್ಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ಕನ್ನಡ ಚಿತ್ರರಂಗದ ನಟ-ನಟಿಯರು ಪ್ರತಿ ಗ್ರಾಮದ ಪ್ರತಿ ಮನೆಗೆ ತೆರಳಿ ತಮ್ಮ ಪರ ಮತ ಯಾಚನೆ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES