ಬೆಂಗಳೂರು : ಈಗಾಗ್ಲೇ ವೈದ್ಯಕೀಯ, ಉದ್ಯಮ, ಆರ್ಕಿಟೆಕ್, ಕೃಷಿ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರೋ ಸೀಕಲ್ ರಾಮಚಂದ್ರ ಗೌಡರು, ಸಾರ್ವಜನಿಕವಾಗಿ ಅಧಿಕೃತವಾಗಿ 150 ಕೋಟಿ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ. ಹಾಗಾಗಿ ಇವ್ರಿಗೆ ದುಡ್ಡು ಮಾಡೋ ಆಶಯವಿಲ್ಲ. ಸೇವೆ ಮಾಡಲು ಮುಂದಾಗಿರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಇವ್ರು.
ಜಸ್ಟ್ ಒಂದೂವರೆ ಎರಡು ತಿಂಗಳಲ್ಲಿ ಇವ್ರು ಧೂಳೆಬ್ಬಿಸ್ತಿರೋ ಪರಿಗೆ ಇಡೀ ಶಿಡ್ಲಘಟ್ಟದ ಜನ ಇವ್ರ ಮೇಲೆ ಭರವಸೆ ಇಟ್ಟಿದ್ದಾರೆ. ಎದುರಾಳಿ ಪಕ್ಷಗಳು ಇವ್ರ ಅಬ್ಬರಕ್ಕೆ ತತ್ತರಿಸುತ್ತಿದ್ದು, ಈಗಾಗ್ಲೇ ಸಾವಿರಾರು ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಲೀಡರ್ಗಳು ರಾಮಚಂದ್ರ ಗೌಡರಿಗಾಗಿ ಬಿಜೆಪಿ ಪಕ್ಷ ಸೇರಿದ್ದಾರೆ. ಇವ್ರು ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದು, ವಿದ್ಯಾವಂತರಾಗಿರೋದ್ರಿಂದ ಕಮಲದ ಅಲೆ ಸಖತ್ ಜೋರಿದೆ.
ಅಲ್ಲದೆ ಶಿಡ್ಲಘಟ್ಟದ ಉತ್ತರ ಭಾಗಕ್ಕೆ ಸುದೀಪ್ ಜೋಶ್ ತಂದಿದ್ದು, ಹೆಚ್ ಕ್ರಾಸ್, ಜಂಗಮಕೋಟೆ, ಮೇಲೂರು ಸರ್ಕಲ್ ಸೇರಿದಂತೆ ಶಿಡ್ಲಘಟ್ಟದ ದಕ್ಷಿಣ ಭಾಗದಲ್ಲಿ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಖಾಡಕ್ಕಿಳಿಯಲಿದ್ದಾರೆ. ಸೀಕಲ್ ರಾಮಚಂದ್ರ ಗೌಡರಿಗೆ ಅಪಾರ ಅಭಿಮಾನಿ ಬಳಗ ಹೊಂದಿರೋ ಧ್ರುವ ಆಗಮನದಿಂದ ಮತ್ತಷ್ಟು ಪ್ಲಸ್ ಆಗಲಿದ್ದು, ಈಗಾಗ್ಲೇ ಗೆದ್ದಷ್ಟು ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ : ‘ಮಾದರಿ ಶಿಡ್ಲಘಟ್ಟ’ ನನ್ನ ಕನಸು, ಅದನ್ನ ಮಾಡಿಯೇ ತೀರುತ್ತೇನೆ : ಸೀಕಲ್ ರಾಮಚಂದ್ರಗೌಡ
ಇದೇ ಮೊದಲ ಬಾರಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಪ್ರಬಲ ಪೈಪೋಟಿ ನೀಡ್ತಿದ್ದು, ಅಧಿಕಾರಕ್ಕೆ ಬರೋ ಎಲ್ಲಾ ಲಕ್ಷಣಗಳನ್ನ ತೋರಿದೆ. ರಾಷ್ಟ್ರೀಯ ನಾಯಕರುಗಳಾದ ನಡ್ಡಾ, ಮಿನಿಸ್ಟರ್ ಸುಧಾಕರ್, ಸಂಸದ ಮುನಿಸ್ವಾಮಿ ಸೇರಿದಂತೆ ಒಂದಷ್ಟು ಸೂಪರ್ ಸ್ಟಾರ್ಗಳ ಆಗಮನದಿಂದ ಶಿಡ್ಲಘಟ್ಟ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಮತ ಹಾಕೋದನ್ನು ಮಾತ್ರ ಯಾರೂ ಮರೆಯಬೇಡಿ.
ಎಲ್ಲೆಲ್ಲಿ ಧ್ರುವ ಸರ್ಜಾ ರೋಡ್ ಶೋ?
ಮಧ್ಯಾಹ್ನ 12 ಗಂಟೆಗೆ ಹೆಚ್ ಕ್ರಾಸ್
ಮಧ್ಯಾಹ್ನ 2 ಗಂಟೆಗೆ ಜಂಗಮಕೋಟೆ
ಮಧ್ಯಾಹ್ನ 3 ಗಂಟೆಗೆ ಮೇಲೂರು ವೃತ್ತ
ಸಂಜೆ 4 ಗಂಟೆಗೆ ಶಿಡ್ಲಘಟ್ಟ ಬಸ್ ನಿಲ್ದಾಣ
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ