Wednesday, January 22, 2025

ಗೌಡ್ರು ರಾಜಕಾರಣಕ್ಕೆ ಬಂದಿರೋದು ದುಡ್ಡು ಮಾಡೋಕೆ ಅಲ್ಲ : ನಟ ಸುದೀಪ್

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನಾಯಕರು ಪರ ಪ್ರಚಾರ ನಡೆಸಿದ್ದಾರೆ. ಇಂದು ನಟ ಕಿಚ್ಚ ಸುದೀಪ್ ಅಬ್ಬರದ ರೋಡ್ ಶೋ ನಡೆಸಿದ್ದಾರೆ.

ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಪರ ನಟ ಕಿಚ್ಚ ಸುದೀಪ್ ಅವರು ಇಂದು ಬೃಹತ್ ಮೆರವಣಿಗೆಯ ಮೂಲಕ ಪ್ರಚಾರ ನಡೆಸಿ, ಮತಯಾಚನೆ ಮಾಡಿದ್ದಾರೆ.

ರೋಡ್ ಶೋ ವೇಳೆ ಮಾತನಾಡಿರುವ ನಟ ಸುದೀಪ್, ಸೀಕಲ್ ರಾಮಚಂದ್ರಗೌಡರು ನನಗೆ ಹಳೆಯ ಪರಿಚಯ. ಅವರು ವಿದ್ಯಾವಂತರು, ಬುದ್ಧಿವಂತರು,‌ ಉದ್ಯಮಿಗಳೂ ಹೌದು. ಗೌಡ್ರು ರಾಜಕಾರಣಕ್ಕೆ ಬಂದಿರೋದು ದುಡ್ಡು ಮಾಡೋಕೆ ಅಲ್ಲ, ಅವ್ರು ದುಡ್ಡಿರೋ ಮನುಷ್ಯನೇ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ : ಸೀಕಲ್ ರಾಮಚಂದ್ರಗೌಡರಿಗೆ ಕಾಂಗ್ರೆಸ್ ನಾಯಕರ ಬೆಂ’ಬಲ’

ಗೌಡ್ರುಗೆ ಒಂದು ಅವಕಾಶ ಕೊಡಿ

ಸೀಕಲ್ ರಾಮಚಂದ್ರಗೌಡರು ನಿಮ್ಮ ಸೇವೆ ಮಾಡೋಕೆ ಬಂದಿದ್ದಾರೆ. ಒಂದು ಅವಕಾಶ ಕೊಡಿ. ಬಿಜೆಪಿಗೆ ನಿಮ್ಮ ಮತ ನೀಡಿ, ಬೆಂಬಲಿಸಿ ಎಂದು ಸೀಕಲ್ ರಾಮಚಂದ್ರ ಗೌಡ ಪರ ಕ್ಯಾಂಪೇನ್ ಮಾಡಿದ್ದಾರೆ. ಇದೇ ವೇಳೆ ನೆರೆದಿದ್ದ ಅಭಿಮಾನಿಗಳನ್ನು ಡೈಲಾಗ್ ಮೂಲಕ ರಂಜಿಸಿದ್ದಾರೆ. ಬಚ್ಚನ್ ಹಾಗೂ ವೀರ ಮದಕರಿ ಚಿತ್ರದ ಡೈಲಾಗ್ ಹೊಡೆದಿದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬುರುಡಗುಂಟೆಯಲ್ಲಿ ಕಿಚ್ಚ ಸುದೀಪ್ ಅವರ ರೋಡ್ ಶೋ ಆರಂಭವಾಯಿತು. ಬುರುಡಗುಂಟೆಯಿಂದ ದಿಬ್ಬೂರಹಳ್ಳಿಯ ವರೆಗೆ ಬೃಹತ್ ರ್ಯಾಲಿ ನಡೆಯಿತು. ಬಳಿಕ, ದಿಬ್ಬೂರಳ್ಳಿಯಲ್ಲಿ ರೋಡ್ ಶೋ ನಡೆಸಿದರು.

ಕೋಲಾರ ಸಂಸದ ಮುನಿಸ್ವಾಮಿ‌, ಮಾಜಿ ಶಾಸಕ ರಾಜಣ್ಣ, ನಿರ್ದೇಶಕ ಆರ್.ಚಂದ್ರು ಸೇರಿ ಹಲವು ಬಿಜೆಪಿ ಮುಖಂಡರು ಸೀಕಲ್ ರಾಮಚಂದ್ರಗೌಡರ ಈ  ಸ್ಟಾರ್ ಕ್ಯಾಂಪೇನ್ ಗೆ ಸಾಥ್ ನೀಡಿದರು.

RELATED ARTICLES

Related Articles

TRENDING ARTICLES