Monday, December 23, 2024

ಪ್ರಧಾನಿ ಮೋದಿ ಕಾಲಿಟ್ಟ ಕಡೆ ಜಯ ನಿಶ್ಚಿತ : ಸಪ್ತಗಿರಿಗೌಡ ವಿಶ್ವಾಸ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿಟ್ಟ ಕಡೆ ಗೆಲುವು ನಿಶ್ಚಿತ ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಇಂದು ಕಾಟನ್ ಪೇಟೆಯ ನಾಗಮ್ಮನಗರದಲ್ಲಿ‌ ಪಾದಯಾತ್ರೆಯ ಮೂಲಕ ಪ್ರಚಾರ ಮಾಡಿದರು.

ಬಹುತೇಕ ತಮಿಳುಭಾಷಿಗರೇ ಹೆಚ್ವಿರುವ ನಾಗಮ್ಮ‌ನಗರದಲ್ಲಿ ಮಾಜಿ ಕಾರ್ಪೊರೇಟರ್ ಪಳನಿ ನೆರವಿನಿಂದ ಪ್ರಚಾರ ಕೈಗೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಹಲವು ಮತದಾರರು ತಮ್ಮ ಬಡಾವಣೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ,ರಸ್ತೆ ಸಮಸ್ಯೆಗಳ ಬಗ್ಗೆ ತಮ್ಮ ಅಳಲು ತೋಡಿಕೊಂಡರು.

ಮೋದಿ ಆಗಮನ ನೂರಾನೆ ಬಲ

ಈ ಸಂದರ್ಭದಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿದ ಸಪ್ತಗಿರಿಗೌಡ, ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲೂ ರೋಡ್ ಶೋ ಮಾಡುತ್ತಿದ್ದಾರೆ. ಅವರ ಆಗಮನದಿಂದ ನಮಗೆ ನೂರಾನೆ ಬಲ ಬಂದಿದೆ. ಇಡೀ ಕ್ಷೇತ್ರದ ಜನ ಅವರನ್ನು ನೋಡಲು ಕಾತರಿಸುತ್ತಿದ್ದಾರೆ. ಅವರು ಕಾಲಿಟ್ಟ ಕಡೆ ಜಯ ನಿಶ್ಚಿತ ಎಂದರು.

ಇದನ್ನೂ ಓದಿ : ಧೈರ್ಯ ಇದ್ರೆ ಮುಟ್ಟಿ ನೋಡಲಿ, ‘ಮಾರುತಿ ಮಹಿಮೆ’ ಏನೆಂದು ತೋರಿಸುತ್ತೇವೆ : ಸಪ್ತಗಿರಿಗೌಡ

ಕ್ಷೇತ್ರದ ಕಡೆ ತಿರುಗಿಯೂ ನೋಡಿಲ್ಲ

ಕಳೆದ 25 ವರ್ಷಗಳಿಂದ ಶಾಸಕರಾಗಿದ್ದವರು ಈ ಬಡಾವಣೆ ಕಡೆ ತಿರುಗಿಯೂ ನೋಡಿಲ್ಲ. ಹಾಗಾಗಿ ಮತದಾರರು ತಮ್ಮನ್ನೇ ಶಾಸಕರು ಎಂದು ತಿಳಿದುಕೊಂಡಿದ್ದಾರೆ. ಇದಲ್ಲದೆ ಕೋವಿಡ್ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಪುಡ್ ಕಿಟ್ ಗಳ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚಿದ್ದು, ಸರ್ಕಾರದ ಪರಿಹಾರದ ಹಣ ಪಡೆದುಕೊಂಡು ತಮ್ಮ ಹೆಸರಿನ ಎನ್ ವೊಲಪ್ ನಲ್ಲಿ ಸರ್ಕಾರದ ಚೆಕ್ ಗಳನ್ನು ಇಟ್ಟು ಹಂಚಿದ್ದು ಇಲ್ಲಿನ ಹಾಲಿ ಶಾಸಕರ ಸಾಧನೆ ಎಂದು ಗುಡುಗಿದರು.

ಈ ಬಾರಿ ತಮಗೆ ಮತ ನೀಡಿ ಗೆಲ್ಲಿಸಿದರೆ ಕ್ಷೇತ್ರದ ಎಲ್ಲ ಬಡಾವಣೆಗಳಲ್ಲಿ ಕಚೇರಿ ತೆರೆದು ಅವರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಸಪ್ತಗಿರಿಗೌಡ ಅವರು ಭರವಸೆ ನೀಡಿದರು.

RELATED ARTICLES

Related Articles

TRENDING ARTICLES