Monday, December 23, 2024

ಹಿರೇಕೆರೂರು ‘ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿ’ಯಾಗಿದೆ : ಬಿ.ಸಿ ಪಾಟೀಲ್

ಬೆಂಗಳೂರು : ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿರುವ ಕೃಷಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಅವರು ಇಂದು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಪ್ರಚಾರ ಕಾರ್ಯಕೈಗೊಂಡರು.

ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಿಂದೆಂದಿಗಿಂತಲು ಹೆಚ್ಚಿನ ಅಭಿವೃದ್ದಿಯಾಗಿದೆ. ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಇದೇ ವೇಳೆ ಹಿರೇಕೆರೂರಿನ ಬಾಳಂಬೀಡ ಗ್ರಾಮಕ್ಕೆ ಭೇಟಿ ನೀಡಿ, ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಿ.ಎಂ ಸಾಲಿ, ಈಟೇರವರು, ಪಾಲಾಕ್ಷ ಗೌಡ್ರು ದೊಡ್ಡ ಗೌಡ್ರು, ಬಿ.ಎನ್ ಬಣಕಾರ್, ಆರ್.ಎನ್ ಗಂಗೊಳ, ಲಿಂಗರಾಜ ಚಪ್ಪರದಳ್ಳಿ, ಗಂಗಾಧರ್, ಸೃಷ್ಟಿ ಪಾಟೀಲ, ಸ್ಥಳೀಯ ಮುಖಂಡರು, ಗಣ್ಯರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.

ಇದನ್ನೂ ಓದಿ : ಹಿರೇಕೆರೂರಿನಲ್ಲಿ ಬಿ.ಸಿ ಪಾಟೀಲ್ ಜಯಬೇರಿ ಬಾರಿಸುತ್ತಾರೆ : ಬಿ.ವೈ ವಿಜಯೇಂದ್ರ

ಬಿಜೆಪಿ ಸೇರಿದಕೈಮುಖಂಡರು

ಹಿರೇಕೆರೂರಿನ ಗೃಹ ಕಚೇರಿಯಲ್ಲಿ ಮೇದೂರು ಗ್ರಾಮದ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಸದಸ್ಯರು ಬಿಜೆಪಿ ಪಕ್ಷದ ಸಿದ್ಧಾಂತ ಹಾಗೂ ಸಚಿವ ಬಿ.ಸಿ ಪಾಟೀಲ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು. ಬಿಜೆಪಿ ಶಾಲು ಹಾಕಿ ಬಿ.ಸಿ ಪಾಟೀಲ್ ಅವರು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ ಬ. ಗೌಡಪ್ಪಳವರ, ಹರೀಶ ಪಾಟೀಲ, ಹನುಮಂತ ದನ್ನೇರ, ಸಂದೇಶ ಕನ್ನಪ್ಪಳವರ, ಪವನ  ಬಡಿಗೇರ, ಪ್ರವೀಣ ಬಡಿಗೇರ, ಶಿದ್ದನಗೌಡ ಯಡಚಿ, ಚಂದ್ರು ಮಾರವಳ್ಳಿ, ಹರೀಶ ಗೌಡಪ್ಪಳವರ, ಗಣೇಶ  ತೋಟದ, ಪ್ರವೀಣ ಹಂಚಿನಮನಿ, ಆದರ್ಶ  ಕುರುಬರ, ವೀರನಗೌಡ ಪಾಟೀಲ, ಪ್ರಶಾಂತ ತೋಟದ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಸೇರಿದರು.

RELATED ARTICLES

Related Articles

TRENDING ARTICLES