Tuesday, August 26, 2025
Google search engine
HomeUncategorizedಸುರೇಶ್ ಕುಮಾರ್ 'ಯಾರ ತಂಟೆಗೂ ಹೋಗದ ಸರಳ, ಸಜ್ಜನರು' : ಸಚಿವ ಕೆ.ಗೋಪಾಲಯ್ಯ

ಸುರೇಶ್ ಕುಮಾರ್ ‘ಯಾರ ತಂಟೆಗೂ ಹೋಗದ ಸರಳ, ಸಜ್ಜನರು’ : ಸಚಿವ ಕೆ.ಗೋಪಾಲಯ್ಯ

ಬೆಂಗಳೂರು : ಸುರೇಶ್ ಕುಮಾರ್ ಅವರು ಸರಳ, ಸಜ್ಜನ ವ್ಯಕ್ತಿ. ಯಾರ ತಂಟೆಗೂ ಹೋಗುವುದಿಲ್ಲ ಎಂದು ಅಬಕಾರಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಅವರ ಪರ ಸಚಿವ ಕೆ.ಗೋಪಾಲಯ್ಯ ಅವರು ಕಾಮಾಕ್ಷಿಪಾಳ್ಯದಲ್ಲಿ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿ, ಮತಯಾಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಗೋಪಾಲಯ್ಯ ಅವರು, ದೇಶ ಮತ್ತು ರಾಜ್ಯ ಒಳಿತು, ರಕ್ಷಣೆಯಾಗಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರಬೇಕು. ಈ ಬಾರಿ ಸುರೇಶ್ ಕುಮಾರ್ ರವರು ಅತ್ಯಧಿಕ ಮತಗಳಿಂದ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಿಜೆಪಿ ‘ಪ್ರಜಾ ಪ್ರಣಾಳಿಕೆ’ ಜನರಿಗೆ ಇಷ್ಟವಾಗಿದೆ : ಸಚಿವ ಬಿ.ಸಿ ಪಾಟೀಲ್

ಮೋದಿ ಆಡಳಿತ ಜನರ ಮನ ತಲುಪಿದೆ

ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಾತನಾಡಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಲಾಗಿದೆ. ಮತದಾರರಿಂದ ಬಿಜೆಪಿ ಪರ ಉತ್ತಮ ಸ್ಪಂದನೆ ಇದೆ. ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರ 9 ವರ್ಷದ ಆಡಳಿತ ಮತ್ತು ರಾಜ್ಯ ಸರ್ಕಾರದ ಉತ್ತಮ ಸಾಧನೆ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಜನರ ಮನೆ, ಮನ ತಲುಪಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬುರವರು, ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯೆ ಪ್ರತಿಮಾ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments