ತುಮಕೂರು : ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವ 224 ವಿಧಾನಸಭೆಗಳಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಎಲ್ಲಾ ಕ್ಷೇತ್ರಗಳಿಗಿಂತ ವಿಭಿನ್ನವಾಗಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಶಾಸಕ ಡಿ.ಸಿ.ಗೌರಿಶಂಕರ್ ಹೋದಲೆಲ್ಲಾ ಭರ್ಜರಿ ಸ್ವಾಗತ ಸಿಗ್ತಾ ಇದೆ.
ನಮ್ಮ ಪಕ್ಷದ ಕಾರ್ಯಕರ್ತರೇ ‘ನಮ್ಮ ಸ್ಟಾರ್ ಪ್ರಚಾರಕರು’. ಪ್ರಾದೇಶಿಕ ಪಕ್ಷವನ್ನು ನಮ್ಮ ಸ್ಟಾರ್ ಗಳು ಕೈ ಬಿಡುವುದಿಲ್ಲ ಎಂದು ಡಿ.ಸಿ ಗೌರಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರವೋ, ಜಾತ್ರಾ ಸಂಭ್ರಮವೋ
ಡಿ.ಸಿ.ಗೌರಿಶಂಕರ್ ಬಂದೋಡನೆ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿರೋ ಜನ ‘ನಮ್ಮ ಮನೆ ಮಗ’ಎಂದು ಹೊತ್ತು ಕುಣಿಸಿ ಸಂಭ್ರಮಿಸುತ್ತಿದ್ದಾರೆ. ನಿಜಕ್ಕೂ ಇದು ಚುನಾವಣಾ ಪ್ರಚಾರವೋ ಅಥವಾ ಗ್ರಾಮಗಳ ಜಾತ್ರಾ ಸಂಭ್ರಮವೋ ಎಂಬಂತೆ ಭಾಸವಾಗುತ್ತಿದೆ.
ಇದನ್ನೂ ಓದಿ : ಸಾಲ ಮನ್ನಾ ಮಾಡಿದ್ದು ನಾನು, ‘ಸಿದ್ದು ಬ್ಯುಸಿ’ಯಲ್ಲಿ ಮರೆತಿದ್ದಾರೆ : ಕುಮಾರಸ್ವಾಮಿ
ಅಭಿಮಾನಕ್ಕೆ ಮನಸೋತ ಗೌರಿಶಂಕರ್
ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಜೆಸಿಬಿಯಲ್ಲಿ ಹೂ ಮಳೆಯನ್ನೇ ಸುರಿಸುತ್ತಿದ್ದಾರೆ. ಮತಯಾಚನೆಗೆ ಬಂದ ಜೆಡಿಎಸ್ ಅಭ್ಯರ್ಥಿ ಶಾಸಕ ಡಿ.ಸಿ.ಗೌರಿಶಂಕರ್ ಅವರಿಗೆ ಈ ಬಾರಿ ಜೆಡಿಎಸ್ ಪಕ್ಷಕ್ಕೆ ನಮ್ಮ ಮತ ಎಂದು ಭರವಸೆ ನೀಡುತ್ತಿದ್ದಾರೆ. ಜನರ ವಿಶ್ವಾಸ, ಜೊತೆಗೆ ಗ್ರಾಮಗಳಲ್ಲಿ ಅದ್ದೂರಿ ಸ್ವಾಗತ ನೀಡುತ್ತಿರೋದು ನೋಡಿದ್ರೆ ಈ ಬಾರಿ ಗೌರಿಶಂಕರ್ ಗೆದ್ದು ಬೀಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಗ್ರಾಮಾಂತರ ವ್ಯಾಪ್ತಿಯ ನಾಗವಲ್ಲಿ ಹೊಳಕಲ್ಲು ಭಾಗದಲ್ಲಿ ಮತಯಾಚನೆ ನಡೆಸಿದ ಡಿ.ಸಿ.ಗೌರಿಶಂಕರ್ ಅವರಿಗೆಗೆ ಬೃಹತ್ ಹಾರಗಳ ಅದ್ದೂರಿ ಸ್ವಾಗತ ದೊರೆತಿದ್ದು ಜನತೆ ಡಿ.ಸಿ.ಗೌರಿಶಂಕರ್ ಅವರನ್ನು ಹೊತ್ತು ಕುಣಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಡಿ.ಸಿ ಗೌರಿಶಂಕರ್ ಮನ ಸೋತಿದ್ದಾರೆ.
ಇದೇ ವೇಳೆ ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಡಿ.ಸಿ ಗೌರಿಶಂಕರ್ ಚುನಾವಣಾ ಪ್ರಚಾರ ಕೈಗೊಂಡರು. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಭತ್ತದ ತೆನೆ ಹೊತ್ತ ರೈತ ಮಹಿಳೆ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.