Monday, December 23, 2024

ಧೈರ್ಯ ಇದ್ರೆ ಮುಟ್ಟಿ ನೋಡಲಿ, ‘ಮಾರುತಿ ಮಹಿಮೆ’ ಏನೆಂದು ತೋರಿಸುತ್ತೇವೆ : ಸಪ್ತಗಿರಿಗೌಡ

ಬೆಂಗಳೂರು : ಧೈರ್ಯ ಇದ್ದರೆ ಬಜರಂಗದಳವನ್ನು ಮುಟ್ಟಿ ನೋಡಲಿ. ‌ಮಾರುತಿಯ ಮಹಿಮೆ ಏನೆಂದು ನಾವು ತೋರಿಸುತ್ತೇವೆ ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ದೇವಸ್ಥಾನ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರು ಅಬ್ಬರದ ಪ್ರಚಾರ ನಡೆಸಿದರು. ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ನಜರಿಗೆ ತಿಳಿಸುತ್ತಾ ಬಿಜೆಪಿಗೆ ಬೆಂಬಲಿಸುವಂತೆ ಮತಯಾಚಿಸಿದರು.

ಗಾಂಧಿನಗರದಲ್ಲಿ ತಮಿಳು ಮತದಾರರು ಹೆಚ್ಚಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಬಂದಿರುವ ನೂರು ಮಂದಿ ಬಿಜೆಪಿ ಕಾರ್ಯಕರ್ತರು ಸಪ್ತಗಿರಿಗೌಡ ಅವರಿಗೆ ಸಾಥ್ ನೀಡಿದರು. ಹೋದ ಕೆಡೆ ಎಲ್ಲಾ ಸಪ್ತಗಿರಿಗೌಡ ಅವರಿಗೆ ಜನರು ಅಭೂತಪೂರ್ವ ಬೆಂಬಲ ನೀಡಿದರು. ಪ್ರಚಾರದ ವೇಳೆ ಪವರ್ ಟಿವಿಯೊಂದಿಗೆ ಮಾತನಾಡಿರುವ ಅವರು, ಕೃಷ್ಣಯ್ಯ ಶೆಟ್ಟಿ ‌ಬಂಡಾಯ ಸ್ಪರ್ಧೆಯಿಂದ ಗಾಂಧಿನಗರದಲ್ಲಿ ಬಿಜೆಪಿಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಸಿದ್ದ’ರಾಮ’ಯ್ಯಗೆ ‘ರಾಮ ಬೇಕು ಆಂಜನೇಯ’ ಬೇಡ್ವೇ? : ಬಿ.ಸಿ ಪಾಟೀಲ್ ಕಿಡಿ

ಕೃಷ್ಣಯ್ಯ ಶೆಟ್ಟಿ ಕ್ಷೇತ್ರಕ್ಕೆ ಹೊಸಬರು

ಕೃಷ್ಣಯ್ಯ ಶೆಟ್ಟಿ ಕ್ಷೇತ್ರ ಹಾಗೂ ಪಕ್ಷದಲ್ಲೂ ಹೊಸಬರು. ಅವರು ಕಾಂಗ್ರೆಸ್ ಗೆ ಹೋಗಿ ಬಂದ ಬಳಿಕ ಒಂದು ರೀತಿಯಲ್ಲಿ ಪಕ್ಷೇತರರಂತೆಯೇ ಇದ್ದರು. ಈ ಬಂಡಾಯ ಸ್ಪರ್ಧೆ ಮಾಡಿದ್ದಕ್ಕೆ ಈಗಾಗಲೇ ಅವರನ್ನು‌ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು.

ದಿನೇಶ್ ಗುಂಡೂರಾವ್ ಈ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕಾರ್ಯಗಳನ್ನು ‌ಮಾಡಿಲ್ಲ. ಹಾಗಾಗಿ, ಈ ಬಾರಿ ಕ್ಷೇತ್ರದ ಜನತೆ ತಮ್ಮನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಪ್ರಸ್ತಾಪ ಮಾಡಿದ್ದಾರೆ. ಜನತೆ ಅವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES