Monday, December 23, 2024

ಇದು ‘ಸಿದ್ದರಾಮಯ್ಯರ ಕೊನೆ ಚುನಾವಣೆ’, ಪ್ಲೀಸ್.. ಗೆಲ್ಲಿಸಿ

ಬೆಂಗಳೂರು : ಇದು ಸಿದ್ದರಾಮಯ್ಯ ಅವರ ಕೊನೆ ಚುನಾವಣೆ. ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಅವರ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಂದೆ ಪರ ಪ್ರಚಾರ ನಡೆಸುವ ವೇಳೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭಾವನಾತ್ಮಕ ಭಾಷಣ ಮಾಡಿದ್ದಾರೆ.

ತಂದೆ ಸಿದ್ದರಾಮಯ್ಯನರು ಬಡವರು, ರೈತರು, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ಇಡೀ ಜೀವನ ಹೋರಾಟ ಮಾಡಿದ್ದಾರೆ. ಪಾಪ, ಸಿದ್ದರಾಮಯ್ಯ ಅವರ ಕೊನೆ ಚುನಾವಣೆ ಇದು. ಆದರಿಂದ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಪ್ರಣಾಳಿಕೆಯಿಂದ ‘ಕಾಂಗ್ರೆಸ್ ಗೆ ನೂರಾನೆ ಬಲ’ ಬಂದಿದೆ : ಆರ್.ವಿ.ದೇವರಾಜ್

ಬಡವರು ಬದುಕಲು ಕಷ್ಟ

ದಲಿತ, ಬಡವರ ವಿರೋಧಿ ಬಿಜೆಪಿ ಪಕ್ಷ ಕಿತ್ತು ಬಿಸಾಕಿ. ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಜಾಸ್ತಿ ಆಗಿದೆ. ಬಡವರು ಬದುಕಲು ಕಷ್ಟವಾಗಿದೆ. ಬಿಜೆಪಿ ಬಡವರ ಜೀವನ ಕಷ್ಟ ಮಾಡಿದೆ. ಬಿಜೆಪಿ ಬಡವರಿಗೆ ಸರ್ಕಾರದ ಹಣ ಖರ್ಚು ಮಾಡಲ್ಲ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಉದ್ಯಮಿ, ಶ್ರೀಮಂತರಿಗೆ ಸರ್ಕಾರದ ಹಣ ಖರ್ಚು ಮಾಡುತ್ತದೆ. ಅದಕ್ಕೆ ನಾವು ಬಡವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ವರುಣ ವಿಧಾನಸಭೆ ಕ್ಷೇತ್ರದ ತಿ.ನರಸೀಪುರ ತಾಲೂಕಿನ ಕಿರಗಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಯತೀಂದ್ರ ಅವರು ಸಿದ್ದರಾಮಯ್ಯ ಅವರ ಪರ ಮತಯಾಚನೆ ಮಾಡಿದರು. ತಂದೆಯನ್ನು ಅಧಿಕ ಮತಗಳ ಅಂತರದಿಂದ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

RELATED ARTICLES

Related Articles

TRENDING ARTICLES