Monday, December 23, 2024

ಸಾಲ ಮನ್ನಾ ಮಾಡಿದ್ದು ನಾನು, ‘ಸಿದ್ದು ಬ್ಯುಸಿ’ಯಲ್ಲಿ ಮರೆತಿದ್ದಾರೆ : ಕುಮಾರಸ್ವಾಮಿ

ಬೆಂಗಳೂರು : ರೈತರ ಸಾಲ ಮನ್ನಾ ಮಾಡಿದ್ದು ನಾನು, ‘ಸಿದ್ದು ಬಿಜಿ’ಯಲ್ಲಿ ಮರೆತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕುಟುಕಿದ್ದಾರೆ.

ರಾಯಚೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಕುಮಾರಸ್ವಾಮಿ ‌ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳ್ತಿದ್ದಾರೆ. ರಾಜ್ಯದಲ್ಲಿ ಯಾರಾದರೂ ರೈತರ ಸಾಲಮನ್ನಾ ಮಾಡಿದ್ದಾರೆ ಅಂದರೆ ಅದು ಕುಮಾರಸ್ವಾಮಿ. ಬಿಜಿಯಲ್ಲಿ ಸಿದ್ದರಾಮಯ್ಯ ಮರೆತಿರಬಹುದು ಎಂದು ಸಿದ್ದು ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್ ನಡೆ ಕೃಷ್ಣಾ ಕಡೆಗೆ ಅಲ್ಲ. ಆಂಧ್ರ ಕಡೆಗೆ ಎಂದು ನಾನಾಗಲೇ ಹೇಳಿದ್ದೆ. ಭದ್ರ, ಮಹದಾಯಿ, ಕೃಷ್ಣಾ ಯೋಜನೆಗಳು ಏನಾದವು?. ಐದು ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯ ಯಾಕೆ ಅಭಿವೃದ್ಧಿ ಮಾಡಲಿಲ್ಲ ಎಂದು ಛೇಡಿಸಿದರು.

ಇದನ್ನೂ ಓದಿ : 15 ವರ್ಷದಿಂದ ‘ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡ್ತಿದೆ’ : ಸಮೃದ್ಧಿ ಮಂಜುನಾಥ್

ಕಾಂಗ್ರೆಸ್​ನವರಿಗೆ ಈಗ ನಿರುದ್ಯೋಗ ನೆನಪಾಗಿದೆ. ಸಿದ್ದರಾಮಯ್ಯ ಎರಡು ಲಕ್ಷ ಉದ್ಯೋಗ ನೀಡಲಿಲ್ಲ. ನಿರುದ್ಯೋಗಿಗಳಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆ ಏನು? ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ ನೀಡುತ್ತಿದ್ದಿರಾ ಎಂದು ಎಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಹಣ ದೋಚಲು ಹಿಟಾಚಿ ಇಟ್ಟಿದೆ

ಜನ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರದ ಖಜಾನೆ ತುಂಬಿಸ್ತಿದ್ದಾರೆ. ಆ ಹಣ ಯಾವ ಕಂಪನಿಗಳಿಗೆ ನೀಡ್ತಿದ್ದೀರಿ ಮೋದಿಯವರೇ? ಜೆಡಿಎಸ್ ಮತ ಹಾಕಿದರೆ ಕಾಂಗ್ರೆಸ್‌ಗೆ ಎನ್ನುತ್ತಾರೆ. ಬಿಜೆಪಿ ಹಣ ದೋಚಲು ಹಿಟಾಚಿ ಇಟ್ಟಿದೆ. ಹಣ ಬಲಕ್ಕಿಂತ ಜನ‌ಬಲ ನೆಚ್ಚಿಕೊಂಡಿದ್ದೇವೆ. ಜೆಡಿಎಸ್ ಕಾಂಗ್ರೆಸ್‌ನ ಬಿಜೆಪಿಯ ಬಿ ಟೀಂ ಅಲ್ಲ, ಜನರ ಟೀಂ ಆಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES